ಮುಖಪುಟ /ಸುದ್ದಿ ಸಮಾಚಾರ   

ಪ್ರವಾಸಿಗರ ಅನುಕೂಲಕ್ಕೆ ಬಸ್ ನಲ್ಲೂ ಬ್ರೇಕ್ ಜರ್ನಿ

ಬೆಂಗಳೂರು, ಡಿ.13:  ರಾಜ್ಯದಲ್ಲಿರುವ ವಿವಿಧ ಪ್ರವಾಸಿ ತಾಣಗಳ ದರ್ಶನ ಮಾಡಲಿಚ್ಛಿಸುವವರಿಗೆ ಸಾರಿಗೆ ಸಂಸ್ಥೆ ಸುವರ್ಣ ಕರ್ನಾಟಕ ಯೋಜನೆ ಜಾರಿಗೆ ತರಲಿದೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸುವರ್ಣ ಕರ್ನಾಟಕ ಎಂಬ ಪ್ರವಾಸ ಟಿಕೆಟ್ ಯೋಜನೆಯಡಿ ನಾಲ್ಕು ದಿನಗಳವರೆಗೆ ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸ ಬಯಸುವ ಪ್ರಯಾಣಿಕರ ಅನುಕೂಲಕ್ಕಾಗಿ ಒಂದೇ ಟಿಕೆಟ್ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ 30 ರೂಪಾಯಿ ನೀಡಿ ದಿನದ ಪಾಸ್ ಪಡೆಯುವಂತೆ ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿಯೂ ಒಂದೇ ಟಿಕೆಟ್ ಪಡೆದು, ಎಲ್ಲಿ ಬೇಕಾದರೂ ಇಳಿದು, ಮತ್ತೆ ಬೇರೆ ಬಸ್ ನಲ್ಲಿ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗುವ ಬ್ರೇಕ್ ಜರ್ನಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

4 ದಿನಗಳ ಪ್ರವಾಸಕ್ಕೆ ಸಾಮಾನ್ಯ ವೇಗದೂತ ವಾಹನಗಳಿಗೆ ೫೦೦ ರೂ, ಶಟಲ್ ವಾಹನಗಳಿಗೆ ೬೦೦ ರೂ ಹಾಗೂ ರಾಜಹಂಸ ವಾಹನಗಳಿಗೆ ೭೦೦ ರೂ ನಿಗದಿಪಡಿಸಲಾಗಿದ್ದು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.

ಮುಖಪುಟ /ಸುದ್ದಿ ಸಮಾಚಾರ