ಮುಖಪುಟ /ಸುದ್ದಿ ಸಮಾಚಾರ 

ಪೊಳ್ಳು ಭರವಸೆಗಳಿಗೆ ಅವಕಾಶ ಇಲ್ಲ...

ನವದೆಹಲಿ, ಮಾರ್ಚ್ 5: ರಾಜಕೀಯ ಪಕ್ಷಗಳು ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಪ್ರಕಟಿಸುವ  ಪ್ರಣಾಳಿಕೆಗಳಲ್ಲಿ ಪೊಲ್ಳು ಭರವಸೆ ನೀಡಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಯಾವುದೇ ಪಕ್ಷ ಯಾವುದೇ ಭರವಸೆ ನೀಡಿದರೂ, ಅದರ ಈಡೇರಿಕೆಗೆ ಸಂಪನ್ಮೂಹೇಗೆ ಕ್ರೋಡೀರಿಸಲಾಗುತ್ತದೆ ಎಂಬ ವಿವರ ನೀಡಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದ ಅವರು,  ಈ ಸಂಬಂಧ ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನವಾವಣೆ ವೇಳೆ ಆಮ್ ಆದ್ಮಿ ಪಕ್ಷ ಈಡೇರಿಸಲು ಸಾಧ್ಯವಾಗದಂಥ ಭರವಸೆ ನೀಡಿದ್ದೇ ಅದರ ಗೆಲುವಿಗೆ ಕಾರಣ ಎಂಬ ಟೀಕೆಗಳೂ ಬಂದಿದ್ದವು. ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ತಮ್ಮ ಪ್ರಣಾಳಿಕೆಯಲ್ಲಿ ಹಲವು ಪೊಳ್ಳು ಭರವಸೆ ನೀಡುವುದು ಕಳೆದ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತದಾರರಿಗೆ ರಾಜಕೀಯ ಪಕ್ಷಗಳು ಅಸಾಧ್ಯವಾದ ಆಮಿಷ ಒಡ್ಡದಂತೆ ತಡೆಯಲು ಇದೇ ಮೊದಲ ಬಾರಿಗೆ ಪೊಳ್ಳು ಭರವಸೆ ನೀಡದಂತೆ ಕಡಿವಾಣ ಹಾಕಿದೆ.

 

ಮುಖಪುಟ /ಸುದ್ದಿ ಸಮಾಚಾರ