ಮುಖಪುಟ /ಸುದ್ದಿ ಸಮಾಚಾರ 

ಲೋಕಾಯುಕ್ತರ ನೇಮಕ ವಿಳಂಬ: ಹಜಾರೆ ಆಕ್ರೋಶ

ಬೆಂಗಳೂರು, ಡಿ.೧೭: ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಇಲಾಖೆಯ ಮುಖ್ಯಸ್ಥರಾದ ಲೋಕಾಯುಕ್ತರನ್ನು ನೇಮಕ ಮಾಡದೆ ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ರಹದಾರಿ ಮಾಡಿಕೊಟ್ಟಿದೆ ಎಂದು ಜನ ಲೋಕಪಾಲ ಹೋರಾಟಗಾರ, ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ಗಂಭೀರ ಆರೋಪ ಮಾಡಿದ್ದಾರೆ. 

ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಳ್ಳಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಹಜಾರೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಖಾಲಿ ಇರುವ ಲೋಕಾಯುಕ್ತ ಹುದ್ದೆಗೆ ಕೂಡಲೇ ದಕ್ಷ ಹಾಗೂ ಕಳಂಕ ರಹಿತರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.  

ಕಳೆದ ೪ ತಿಂಗಳುಗಳಿಂದಲೂ ಲೋಕಾಯುಕ್ತ ಹುದ್ದೆ ಭರ್ತಿ ಮಾಡದೆ ಖಾಲಿ ಇಟ್ಟಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ಭ್ರಷ್ಟರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ಹೀಗಾಗೇ ಅನಗತ್ಯ ವಿಳಂಬ ಮಾಡುತ್ತಾ, ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದರು.

ಮುಖಪುಟ /ಸುದ್ದಿ ಸಮಾಚಾರ