ಮುಖಪುಟ /ನಮ್ಮಹಬ್ಬಗಳು 

ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್ಬ

*ಶೋಭಾ ಎನ್. ಸತೀಶ್

Bombe,  ಬೊಂಬೆ ಹಬ್ಬ, Dasara festivals, doll show, ದಸರಾಭಾರತೀಯ ಸಂಸ್ಕೃತಿಯ ಪರಂಪರೆಯ ಬಹುತೇಕ ಎಲ್ಲ ಹಬ್ಬಗಳೂ ಕರ್ನಾಟಕದಲ್ಲಿ ಆಚರಣೆಯಲ್ಲಿವೆ. ಸಾಮಾನ್ಯವಾಗಿ ಹಬ್ಬಗಳು ವಿಜಯೋತ್ಸವದ ಸಂಕೇತವೇ ಈಗಿವೆ. ಈ ಪೈಕಿ ನವರಾತ್ರಿ ಅಥವಾ ದಸರಾ ಅತಿ ಮುಖ್ಯವಾದದ್ದು.

ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಸರಣಿಯೇ ದಸರಾ. ದಸರೆಗೆ ವಾಸ್ತವವಾಗಿ ಖ್ಯಾತಿ ಬಂದಿದ್ದೇ ಮೈಸೂರಿನಿಂದ. ಮೈಸೂರು ಸಂಪ್ರದಾಯದ ದಸರೆಯ ವೈಭವ ಮತ್ತೆಲ್ಲೂ ಕಾಣಲು ಸಾಧ್ಯವೇ ಇಲ್ಲ.

ಶರದೃತುವಿನ ಮೊದಲ ದೊಡ್ಡ ಹಬ್ಬವೇ ದಸರೆ. ದಸರೆಗೆ ದಶಹರ, ದಶರಾತ್ರಿ, ನವರಾತ್ರಿ, ಶರನ್ನವರಾತ್ರಿ ಎಂಬ ಹೆಸರೂ ಉಂಟು. ಮಹಾಲಯ ಅಮಾವಾಸ್ಯೆ ಕಳೆದ ಬಳಿಕ ಮಾರನೆ ದಿನ ಬರುವ ಆಶ್ವಯುಜ ಪಾಡ್ಯ ಮನೆ ಮನೆಯಲ್ಲೂ ಸಂಭ್ರಮ, ಸಂತಸ ತರುತ್ತದೆ. ಮೈಸೂರು ಭಾಗದಲ್ಲಂತೂ ಹೆಣ್ಣು ಮಕ್ಕಳು ಈ ಹಬ್ಬಕ್ಕಾಗಿ ಕಾತರಿಸುತ್ತಾರೆ. ಮನೆ ಮನೆಗಳಲ್ಲೂ ಬೊಂಬೆಯನ್ನು ಕೂರಿಸಲು ಸಜ್ಜಾಗುತ್ತಾರೆ.

ಮನೆಯನ್ನು ಸಾರಿಸಿ, ಗುಡಿಸಿ, ರಂಗವಲ್ಲಿಯಲ್ಲಿ ಅಲಂಕರಿಸುತ್ತಾರೆ. ಹಂತ ಹಂತವಾಗಿ ಹಲಗೆಯನ್ನುಮೆಟ್ಟಿಲಿನಂತೆ ಜೋಡಿಸಿ ವಿವಿಧ ಹಂತದಲ್ಲಿ ನಾನಾ ಬಗೆಯ ಬಣ್ಣ ಬಣ್ಣದ ಬೊಂಬೆಗಳನ್ನು ಕೂರಿಸುತ್ತಾರೆ.

Doll Show, Dasara, ದಸರಾ ಬೊಂಬೆ ಹಬ್ಬ, ರಾಜ ರಾಣಿ ಗೊಂಬೆ, ಪಟ್ಟದ ಬೊಂಬೆ, ಮೈಸೂರು ಮನೆತನ, ಮನೆ ಮನೆಯಲ್ಲೂ ಬೊಂಬೆ ಹಬ್ಬಮೈಸೂರು ಪ್ರಾಂತದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿದ್ದು, ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾರಣ, ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಅಂದರೆ ರಾಜ ರಾಣಿಯರ ಬೊಂಬೆಯನ್ನು ಮನೆಯಲ್ಲಿ ಕೂರಿಸಿ ಪೂಜಿಸುವುದು ವಾಡಿಕೆ. ಇಂದಿಗೂ ಮೈಸೂರು ಭಾಗದಲ್ಲಿ ಮದುವೆಯ ಸಂದರ್ಭದಲ್ಲಿ ಅಂದರೆ  ವರಪೂಜೆಯ ದಿನ ಪಟ್ಟದ ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಇದೆ.

ಈ ರಾಜಾ ರಾಣಿ ಬೊಂಬೆಗಳ ಜೊತೆಗೆ ಹಲವು ಬಗೆಯ ಬೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ, ಪ್ರತಿ ಸಂಜೆ ಆರತಿ ಮಾಡಿ ಬೊಂಬೆ ಬಾಗಿನ ನೀಡುವುದೂ ಸಂಪ್ರದಾಯಗಳಲ್ಲೊಂದು. ಹೀಗೆ ಬೊಂಬೆಗಳನ್ನು ಕೂರಿಸುವಾಗ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ಹಾಗೂ ಹನುಮನ ಬೊಂಬೆಗಳನ್ನೂ ಇಡುತ್ತಾರೆ.

Bombe habba, ಬೊಂಬೆಹಬ್ಬಶ್ರೀರಾಮ ಈ ಅವಧಿಯಲ್ಲೇ ರಾವಣನನ್ನು ಸಂಹರಿಸಿದ್ದು ಎನ್ನುವ ಕಾರಣದಿಂದ ರಾಮನ ಬೊಂಬೆಗಳನ್ನೂ ಇಡುತ್ತಾರೆ. ಕೆಲವರ ಮನೆಗಳಲ್ಲಿ ದಶಾವತಾರದ ಬೊಂಬೆಗಳನ್ನೂ ಕೂರಿಸುತ್ತಾರೆ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ದಸರೆ ಬೊಂಬೆಹಬ್ಬ ಎಂದೇ ಖ್ಯಾತಿ ಪಡೆದಿದೆ. ಸಂಜೆ ಕೋಲಾಟವೂ ಈ ಹಬ್ಬದ ವಿಶೇಷಗಳಲ್ಲೊಂದು.

ಸರಸ್ವತಿ ಹಬ್ಬದ ದಿನ ಬೊಂಬೆಗಳ ಜೊತೆಗೆ ಶಾರದೆಯ ಬೊಂಬೆಯನ್ನೂ ಕೂರಿಸಿ, ಕಳಶ ಇಟ್ಟು ಸೀರೆ ಉಡಿಸಿ ವಿಶೇಷವಾಗಿ ಪೂಜಿಸಲಾಗುತ್ತದೆ. ಅಂದು ಪುಸ್ತಕ, ಪೆನ್ಸಿಲ್, ರಬ್ಬರ್, ಪೆನ್ ಗಳಿಗೂ ಪೂಜೆ ನಡೆಯುತ್ತದೆ.

ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳ ಕೂರಿಸಿ ಪೂಜಿಸಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದ ಕೆಲವರು ಶಾರದೆಯ ಹಬ್ಬದಿಂದ ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ. ಕಾಳಿಕಾ ಪುರಾಣದಲ್ಲಿ ಹೇಳಿರುವಂತೆ ಮೈಸೂರು ಸೀಮೆಯಲ್ಲಿ ಹಬ್ಬದ ಆಚರಣೆ ನಡೆಯುತ್ತದೆ.

ಮೈಸೂರು ಒಡೆಯರ ದಸರಾ ಆಚರಣೆ
ಮೈಸೂರು ಒಡೆಯರ, ವಿಜಯನಗರದರಸರ ವೈಭವದ ದಸರಾ
ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್ಬ
ವಿಜಯೋತ್ಸವದ ವಿಜಯದಶಮಿಯ ವಿಚಾರಧಾರೆ

ಮುಖಪುಟ /ನಮ್ಮಹಬ್ಬಗಳು