ಮುಖಪುಟ /ನಮ್ಮದೇವಾಲಯಗಳು   

ಲಕ್ಷ್ಮಣರಾವ್ ರಸ್ತೆಯ ಅಶ್ವತ್ಥಕಟ್ಟೆ ದೇವಸ್ಥಾನ
 

*ಟಿ.ಎಂ.ಸತೀಶ್

ಬೆಂಗಳೂರು ಮಹಾನಗರದ ಹಳೆಯ ಬಡಾವಣೆಗಳಲ್ಲಿ ಒಂದಾದ ಹುರಿಯೋಪೇಟೆಯ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯ ತಿರುವಿನಲ್ಲಿ ಇರುವ ಲಕ್ಷ್ಮಣರಾವ್ ರಸ್ತೆಯಲ್ಲಿ ಇರುವ ಅಶ್ವತ್ಥನಾರಾಯಣ ಕಟ್ಟೆಯ ದೇವಸ್ಥಾನ ಪುರಾತನ ಸ್ಮಾರಕಗಳಲ್ಲಿ ಒಂದಾಗಿದೆ.

ನೂರೈವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಈ ದೇವಾಲಯದಲ್ಲಿ ಗಣಪತಿ, ನಾಗದೇವತೆ, ವಲ್ಲಿ, ಈಶ್ವರ, ಬಸವಣ್ಣ ಮೊದಲಾದ ಒಂಬತ್ತು ಶಿಲಾ ವಿಗ್ರಹಗಳಿವೆ. ೨೫ ವರ್ಷಗಳ ಹಿಂದೆ ಸ್ಥಳೀಯರು ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿದ್ದಾರೆ. ಪ್ರತಿ ವರ್ಷ ಇಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಭಕ್ತ ಮಂಡಳಿ ಆಶ್ರಯದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.

ಈ ದೇವಾಲಯದಲ್ಲಿ ಪೂಜೆ ಮಾಡಿಸಿದರೆ ಕುಜ ದೋಷ ನಿವಾರಣೆ ಆಗುತ್ತದೆ, ಸಂತಾನ ಭಾಗ್ಯ ಇಲ್ಲದವರಿಗೆ ಮಕ್ಕಳ ಭಾಗ್ಯ ಸಿಗುತ್ತದೆ, ಕಂಕಣ ಭಾಗ್ಯ ತಡವಾಗಿರುವರಿಗೆ ಶೀಘ್ರ ಮದುವೆಯಾಗುತ್ತದೆ ಎಂಬ ನಂಬಿಕೆ ಇದೆ.

ಈ ದೇವಾಲಯದ ಅಶ್ವತ್ಥಕಟ್ಟೆಯಲ್ಲಿ ಸುಮಾರು 7ಅಡಿ ಎತ್ತರದ ಐದು ಹೆಡೆಯ ನಾಗದೇವರ ಕಲ್ಲಿನ ವಿಗ್ರಹ ಇದೆ. ಭಕ್ತ ಮಂಡಳಿಯವರು ಇದಕ್ಕೆ 10 ಕೆ.ಜಿ. ತೂಕದ ಬೆಳ್ಳಿಯ ಶೇಷಾಭರಣ ಮಾಡಿಸಿದ್ದಾರೆ.

ದೇವಾಲಯದ ಬಗ್ಗೆ  ಹೆಚ್ಚಿನ ಮಾಹಿತಿಗಾಗಿ ಶ್ರೀಪಸನ್ನ ವಿದ್ಯಾಗಣಪತಿ ಭಕ್ತಮಂಡಳಿಯ ಪದಾಧಿಕಾರಿಗಳನ್ನು ದೂರವಾಣಿ ಸಂಖ್ಯೆ 9844022902 ಮೂಲಕ ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು