ಮುಖಪುಟ /ನಮ್ಮದೇವಾಲಯಗಳು 

ಮಧುಗಿರಿಯ ಮಲ್ಲಿಕಾರ್ಜುನಸ್ವಾಮಿ ದೇವಾಲಯ

*ಟಿ.ಎಂ.ಸತೀಶ್

Madugiri Mallikarjuna ಮಧುಗಿರಿ ಮಲ್ಲಿಕಾರ್ಜುನತುಮಕೂರು ಜಿಲ್ಲೆಯ 10 ತಾಲೂಕು ಕೇಂದ್ರಗಳಲ್ಲಿ ಮಧುಗಿರಿಯೂ ಒಂದು. ಹರಿಹರ ಕ್ಷೇತ್ರವೆಂಬ ಅಭಿದಾನಕ್ಕೆ ಪಾತ್ರವಾದ ಈ ಜಿಲ್ಲೆಯ ಈ ಊರಿನಲ್ಲೂ ವಿಷ್ಣು ಹಾಗೂ ಶಿವ ದೇವಾಲಯಗಳಿವೆ. ತುಮಕೂರು ಜಿಲ್ಲಾಕೇಂದ್ರದಿದ 43 ಕಿಲೋ ಮೀಟರ್ ದೂರದಲ್ಲಿರುವ ಮಧುಗಿರಿಯ ಸುಂದರ ಬೆಟ್ಟ ಶ್ರೇಣಿಯ ತಪ್ಪಲಿನಲ್ಲಿ ಪುರಾತನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದೆ.

ಅಗಾಧವಾದ ಕಲ್ಲುಚಪ್ಪಡಿಗಳಿಂದಲೂ, ಇಟ್ಟಿಗೆ, ಗಾರೆಯಿಂದ ರೂಪುಗೊಂಡಿರುವ ಈ ದೇಗುಲ ಮಹಾದ್ವಾರ, ವಿಶಾಲ ಒಳಾಂಗಣ, ಗರ್ಭಗುಡಿ ಒಳಗೊಂಡಿದ್ದು, ದ್ರಾವಿಡ ಶೈಲಿಯಲ್ಲಿದೆ. ಮೋಹಕವಾದ ರಾಜಗೋಪುರ ದೇವಾಲಯಕ್ಕೆ ಕಲಶಪ್ರಾಯವಾಗಿದೆ. ವಿಶಾಲ ಪ್ರದಕ್ಷಿಣ ಪಥ ಹಾಗೂ ಪ್ರಾಕಾರದಲ್ಲಿ ನಂದಿಯ ಮಂಟಪವಿದ್ದು, ಇದರಲ್ಲಿ ಸುಂದರವಾದ ನಂದಿಯ ಬೃಹತ್ ವಿಗ್ರಹವಿದೆ. ಪಕ್ಕದಲ್ಲಿಯೇ ಕಲ್ಯಾಣಮಂಟಪವಿದೆ.

ಮಧುಗಿರಿ ಮಲ್ಲಿಕಾರ್ಜುನಸ್ವಾಮಿ ದೇವಾಲಯ ನಂದಿ Madhugiri mallikarjuna nandiಇಲ್ಲಿ ವೀರಭದ್ರ ಹಾಗೂ ನಾಲ್ಕು ಮಂದಿ ಶಾತ್ತೇಯರ ಉಬ್ಬುಶಿಲ್ಪವಿದೆ. ಕಂಬಗಳಲ್ಲಿ ಷಣ್ಮುಖ, ಬೇಡರ ಕಣ್ಣಪ್ಪ, ಶಿವಪಾರ್ವತಿ ಮೊದಲಾದ ಉಬ್ಬುಶಿಲ್ಪಗಳಿವೆ. ದೇವಾಲಯದಲ್ಲಿ  ನೂರಾರು ಕಂಬಗಳಿದ್ದು ಹೇಳಿಕೊಳ್ಳುವಂಥ ಸೂಕ್ಷ್ಮ ಕಲಾಕೆತ್ತನೆಗಳಿದಿದ್ದರೂ ಬಹುತೇಕ ಕಂಬಗಳಲ್ಲಿ ಉಬ್ಬುಶಿಲ್ಪಗಳಿವೆ.

ಈ ಮಧ್ಯೆ ಇರುವ ಮಂಟಪದಲ್ಲಿ ಹೋಮಕುಂಡವಿದೆ. ಒಳ ಪ್ರಾಕಾರದಲ್ಲಿರುವ ಎಲ್ಲ ಕಂಬಗಳಲ್ಲೂ ಗಣಪತಿ, ಸುಬ್ರಹ್ಮಣ್ಯ, ಶಿವಗಣಗಳ ಹಲವು ಉಬ್ಬು ಶಿಲ್ಪಗಳಿವೆ. ಗರ್ಭಗೃಹದಲ್ಲಿ ಸುಂದರವಾದ ಶಿವಲಿಂಗವಿದ್ದು, ದರ ಎದುರು ನಂದಿಯ ಪುಟ್ಟ ವಿಗ್ರಹವಿದೆ. ನಾಗಾಭರಣ ಅಲಂಕಾರದಲ್ಲಿ ಶಿವಲಿಂಗ ನೋಡುವುದೇ ಒಂದು ಸೊಬಗು. 65;.

Madugiri Mallikarjunaswamy temple rajagopura, ಮಧುಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ರಾಜಗೋಪುರ ಪ್ರಾಚೀನತೆಯ ಕಲ್ಪನೆಗೇ ಭಂಗತಂದಿದೆ.;ೆ.

ಈ ದೇಗಲದಲ್ಲಿ ಹೇಳಿಕೊಳ್ಳುವಂತಹ ಸೂಕ್ಷ್ಮ ಕೆತ್ತನೆಗಳೇನೂ ಇಲ್ಲ. ಆದರೆ, ಪುರಾತನ ದೇಗುಲದ ಕಂಬಗಳಲ್ಲಿ ಕೆಲವು ಕೆತ್ತನೆಗಳಿವೆ. ಇಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಬಣ್ಣ ಬಣ್ಣದ ಕೃತಕ ಟೈಲ್ಸ್‌ಗಳನ್ನು ಹಾಕಿರುವುದು ದೇವಾಲಯದ ಅಂದವನ್ನೇ ಹಾಳು ಮಾಡಿವೆ.

ಮಧುಗಿರಿಯ ಎರಡು ಕಣ್ಣುಗಳಂತಿರುವ ಮಲ್ಲಿಕಾರ್ಜುನ ಹಾಗೂ ವೆಂಕಟರಮಣನ ದೇವಾಲಯಗಳನ್ನು ನಾಡಪ್ರಭುಗಳಾಗಿದ್ದ ಮುಮ್ಮಡಿ ಚಿಕ್ಕಪ್ಪಗೌಡರು ಕಟ್ಟಿಸಿದರು. ವಿವಿಧೋದ್ದೇಶಕ್ಕಾಗಿ ಅಂಗಳದ ಬಲಭಾಗದಲ್ಲಿ ಉಯ್ಯಾಲೋತ್ಸವ ಮಂಟಪ ನಿರ್ಮಿಸಿದ ಅವರ ದೂರದೃಷ್ಟಿ ದೊಡ್ಡದು ಎಂಬುದರಲ್ಲಿ ಅನುಮಾನವೇ ಇಲ್ಲ.

Madhugiri Bramarambha templeಮೈದನಹಳ್ಳಿ: ಮಧುಗಿರಿಯಿಂದ 16 ಕಿಲೋಮೀಟರ್ ದೂರದಲ್ಲಿ ಎಲೆಹುಲ್ಲ ಬಯಲ ಮೈದನಹಳ್ಳಿ ಎಂಬ ಕುಗ್ರಾಮವಿದೆ. ಇಲ್ಲಿ ಕೃಷ್ಣಮೃಗ ಧಾಮವಿದೆ. ಪರಿಸರಪ್ರೇಮಿಗಳ ಹೋರಾಟ ಹಾಗೂ ಅರಣ್ಯ ಇಲಾಖೆ ತೋರಿದ ಆಸಕ್ತಿಯ ಫಲವಾಗಿ ಕೃಷ್ಣಮೃಗ ಉದ್ಯಾನ ಈ ಕುಗ್ರಾಮದಲ್ಲಿ ರೂಪುಗೊಂಡಿದೆ.

ಬೆಟ್ಟದ ತಪ್ಪಲಿನಲ್ಲಿರುವ ಈ ಸುಂದರ ರಮಣೀಯ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೃಷ್ಣಮೃಗಳೂ, ಜಿಂಕೆಗಳೂ ಇವೆ. ಮಧುಗಿರಿಯಿಂದ ಇಲ್ಲಿಗೆ ಹೋದರೆ ಮನಸ್ಸಿಗೆ ಆನಂದ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಮಧುಗಿರಿಯಿಂದ ಇಲ್ಲಿಯವರೆಗೆ ಕಚ್ಚಾ ರಸ್ತೆಯಲ್ಲಿ ಹೋಗಿ ಬರುವುದೇ ಒಂದು ದೊಡ್ಡ ಸಾಹಸ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.innnnn

ಮುಖಪುಟ /ನಮ್ಮದೇವಾಲಯಗಳು