ಮುಖಪುಟ /ಸುದ್ದಿ ಸಮಾಚಾರ 

ಆರೋಗ್ಯಪೂರ್ಣ ಸಮಾಜಕ್ಕೆ ಚರ್ಚೆ ಅತ್ಯಗತ್ಯ - ಕೆಂಪಯ್ಯ
ವನಿತಾ ಸ್ಮಾರಕ 14ನೇ ರಾಜ್ಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ

Debate 15, Vanita memorial state level Kannada debate competition, ವನಿತಾ ಸ್ಮಾರಕ ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ, Kempaiah IPS officer with T.M. Satish, Editor, Kannadaratna.com, ಐ.ಪಿ.ಎಸ್. ಅಧಿಕಾರಿ ಕೆಂಪಯ್ಯ ಅವರೊಂದಿಗೆ ಕನ್ನಡರತ್ನ.ಕಾಂ ಸಂಪಾದಕ ಟಿ.ಎಂ. ಸತೀಶ್ ಬೆಂಗಳೂರು, ಅ.3 ಅ.೩: ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಚರ್ಚೆ ಅತ್ಯವಶ್ಯಕ ಎಂದು ನಿವೃತ್ತ ಐಪಿಎಸ್ ‌ಅಧಿಕಾರಿ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿಂದು ಕರ್ನಾಟಕ ಚರ್ಚಾವೇದಿಕೆ ಏರ್ಪಡಿಸಿದ್ದ ಕು.ವನಿತಾ ಸ್ಮಾರಕ ೧೪ನೇ ರಾಜ್ಯ ಮಟ್ಟದ ಕನ್ನಡ ಚರ್ಚಾಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕ ಜಾಗೃತಿಯನ್ನು ಹೆಚ್ಚಿಸಿ ಅವರಲ್ಲಿ ನಾಯಕತ್ವದಗುಣ ಬೆಳೆಸುತ್ತದೆ ಎಂದರು.

ಬಿಬಿಎಂಪಿಯ ನಿವೃತ್ತ ಜಂಟಿ ಆಯುಕ್ತ ಜಿ.ಎಚ್.ಪುಟ್ಟಹಲಗಯ್ಯ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂಬುದನ್ನು ಶಿಕ್ಷಣ ಸಂಸ್ಥೆಗಳು ಹಾಗೂ ಪಾಲಕರು ಅರಿಯಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಡಾ..ಎಚ್.ವಿ. ವೇಣುಗೋಪಾಲ್, ಗಾಂಧೀಜಿ ಅವರು ದಂಡಿ ಸತ್ಯಾಗ್ರಹದ ವೇಳೆ, ಪಂಡಿತ್ ನೆಹರೂ ಅವರು ಕೆಂಪು ಕೋಟೆಯ ಮೇಲೆ ಮತ್ತು ಸ್ವಾಮಿ ವಿವೇಕಾನಂದರು ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಪ್ರಸ್ತಾಪಿಸಿ ಮಾತುಗಾರಿಕೆಯ ಮಹಿಮೆಯನ್ನು ವಿವರಿಸಿದರು.

Debate 15, Vanita memorial state level Kannada debate competition, ವನಿತಾ ಸ್ಮಾರಕ ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆನ್ಯಾಷನಲ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಎ.ಎಚ್. ರಾಮರಾವ್ ಚರ್ಚಾಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಅತ್ಯಂತ ಸಹಕಾರಿ ಆಗುತ್ತವೆ. ಬಹುರಾಷ್ಟ್ರೀಯ ಕಂಪನಿಗಳ ಸಂದರ್ಶನ, ಗುಂಪು ಚರ್ಚೆಯ ವೇಳೆ ಕಾಲೇಜು ದಿನಗಳ ಚರ್ಚಾಸ್ಪರ್ಧೆಯ ಅನುಭವ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.

ವೇದಿಕೆಯಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಮಲ್ಲೇಶಯ್ಯ, ವೈದ್ಯರ ನಿರ್ಲಕ್ಷ್ಯದಿಂದ ಅಕಾಲಿಕ ಮರಣಕ್ಕೆತುತ್ತಾತಮ್ಮ ಪುತ್ರಿ ವನಿತಾ ಹೆಸರಿನಲ್ಲಿ ಈ ಸ್ಪರ್ಧೆ ನಡೆಸುತ್ತಾಎಲ್ಲ ಸ್ಪರ್ಧಿಗಳಲ್ಲಿ ತಮ್ಮ ಪುತ್ರಿಯನ್ನುಕಾಣುತ್ತಿರುವುದಾಗಿ ಹೇಳಿದರು.

ಸಾಗರ, ತಿಪಟೂರು, ತುಮಕೂರು, ಕನಕಪುರ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ೭೦ ಕಾಲೇಜುಗಳ ೧೪೦ ಸ್ಪರ್ಧಿಗಳು ಈ ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯಾಷನಲ್ ಎಡ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಎಚ್. ರಾಮರಾವ್ ಮತ್ತು ಶ್ರೀ ಸದ್ಗುರು ಸಾಯಿನಾಥ ವಿದ್ಯಾ ಸಮೂಹದ ಅಧ್ಯಕ್ಷ ಡಾ.ಆರ್.ಪ್ರಭಾಕರರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.

ಪದವಿ ವಿಭಾಗದ ಪರ್ಯಾಯ ಪಾರಿತೋಷಕವನ್ನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಪಡೆದರೆ, ಪದವಿಪೂರ್ವ ವಿಭಾಗದ ಪಾರಿತೋಷಕ ಜಯನಗರ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳ ಪಾಲಾಯಿತು.

ಸಮಾರಂಭದಲ್ಲಿ ಪ್ರೊ.ಎಚ್.ಕೆ. ಮೌಳೇಶ್, ಪ್ರೊ. ವಿ. ನಾರಾಯಣ ಸ್ವಾಮಿ, ಪ್ರೊ.ಗಿರೀಶ್‌ಕುಲಕರ್ಣಿ, ಪ್ರೊ.ವಿಶ್ವನಾಥ್, ಪತ್ರಕರ್ತ ಟಿ.ಎಂ. ಸತೀಶ್, ಹಿರಿಯ ಚರ್ಚಾಪಟು ಜಿ.ಆರ್. ಸತ್ಯಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

 ಮುಖಪುಟ /ಸುದ್ದಿ ಸಮಾಚಾರ