Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್
Posted date: 04 Wed, Jul 2018 03:12:19 PM

ಪ್ರೇಕ್ಷಕರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನಪ್ರಯೋಗಗಳನ್ನು ಮಾಡುತ್ತ ಹೊಸ ದಾಖಲೆಗಳಿಗೆ ನಾಂದಿ ಹಾಡುತ್ತಿದೆ.

ಕನ್ನಡಚಿತ್ರರಂಗಕ್ಕೆ ಹಾಸ್ಯಕಲಾವಿದರನ್ನುಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿಕಾಮಿಡಿ ಕಿಲಾಡಿಗಳುಸೀಸನ್ ೧ ಮತ್ತುಸೀಸನ್ ೨ ಎಂಬ ಅತ್ಯದ್ಭುತ ಯಶಸ್ಸಿನ ಹಾಸ್ಯಕಾರ್ಯಕ್ರಮವನ್ನು ಪರಿಚಯಿಸಿದಲ್ಲದೇಅದುಕರ್ನಾಟಕವಲ್ಲದೇದೇಶ ವಿದೇಶದಕನ್ನಡಿಗರಲ್ಲೆರುಅದರಒಂದು ಭಾಗವಾಗುವಂತೆ ಮಾಡಿದಕೀರ್ತಿಜೀ ವಾಹಿನಿಗೆ ಸಲ್ಲುತ್ತದೆ.

ಎಲ್ಲರಿಗುಅರ್ಥವಾಗುವ ಸರಳ ಸುಂದರ ಏಕೈಕ ಭಾಷೆಯೆಂದರೆ ನಗು, ಅದಕ್ಕೆಕೊನೆಯೇಇಲ್ಲ ಎಂಬ ಸೂತ್ರವನ್ನಿಟ್ಟುಕೊಂಡು ಇದೀಗ ನಮ್ಮ ವಾಹಿನಿಯುಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪೆಂಬ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗುತ್ತಿದೆ,,,

ಹೊಸ ಹೊಸ ಪ್ರಯೋಗಗಳು, ಹೊಸ ಪ್ರಯತ್ನದೊಂದಿಗೆ ಹಿಂದೆಂದು ನೋಡಿರದಂತ, ಹಿಂದೆಂದು ಕೇಳಿರದಂತ ಹಾಸ್ಯಮನರಂಜನೆ ಈ ಒಂದುಕಾರ್ಯಕ್ರಮದಲ್ಲಿ ನಿಮಗಾಗಿ ಎದುರುಗೊಳ್ಳುತ್ತಿದೆ,,,
ಸೀಸನ್ ೧ ರಲ್ಲಿ ನಕ್ಕು ನಲಿಸಿ ಕರ್ನಾಟಕದಜನಮನಗೆದ್ದ ಕಾಮಿಡಿಕಿಲಾಡಿಗಳ ಜೊತೆಗೆಅವರಷ್ಟೇ ಸರಿಸಮಾನರಾಗಿಜನಮಾನಸ ಗಳಿಸಿಕೊಂಡ ಸೀಸನ್ ೨ ಕಾಮಿಡಿ ಕಿಲಾಡಿಗಳೆಲ್ಲರೂ ತಂಡಗಳಾಗಿ ರೂಪುಗೊಂಡುನಿಮ್ಮನ್ನುಒಂದೇ ವೇದಿಕೆಯಲ್ಲಿನಗಿಸಲು ಕಾತುರರಾಗಿದ್ದಾರೆ.

ಅಭಿನಯದಜೊತೆಗೆಅನುಭವಜೊತೆಯಾದರೆಗುರಿ ಶತಸಿದ್ದ ಎಂಬ ಮಾತಿನಂತೆ ಪ್ರೇಕ್ಷಕರ ನಗುವನ್ನು ಇಮ್ಮಡಿಗೊಳಿಸಲು ನಮ್ಮಕಾಮಿಡಿ ಕಿಲಾಡಿಗಳಿಗೆ ನಗುವಿನ ರಾಯಭಾರಿಗಳಾಗಿ ಜೊತೆಯಾಗಲಿದ್ದಾg.ಕನ್ನಡಚಿತ್ರರಂಗದ ಹಾಸ್ಯ ದಿಗ್ಗಜರು,,ತಮ್ಮ ಸಿನಿಬದುಕಿನಅನುಭವವನ್ನುಪರಿಚಯಿಸುವುದರಜೊತೆಗೆಕಾಮಿಡಿ ಕಿಲಾಡಿಗಳಿಗೆ ನಟನೆಯ ಮಾರ್ಗದರ್ಶನವನ್ನು ನೀಡಲುಉತ್ಸಾಹಕರಾಗಿಸಜ್ಜಾಗುತ್ತಿದ್ದಾರೆ

ಇನ್ನುಳಿದಂತೆ ಕಾರ್ಯಕ್ರಮಕ್ಕೆಅಂದದ ಮೆರುಗೆಂಬಂತೆ ತ್ರಿವಳಿ ಜೆಡ್ಜಸ್ ಗಳಾದ ಯೋಗರಾಜ್ ಭಟ್, ಜಗ್ಗೇಶ್ ಹಾಗು ಶ್ರೀಮತಿ ರಕ್ಷಿತ ಪ್ರೇಮ್ರವರು ನಿರ್ಣಾಯಕರಾದರೆ ಮಕ್ಕಳಿಂದ ಹಿಡಿದು ವಯೋಮಾನದವರಿಗೆಲ್ಲರಿಗು ಪ್ರೀತಿ ಪಾತ್ರರಾದಮಾಸ್ಟರ್‌ಆನಂದ್ತಮ್ಮ ಮಾತಿನಚಟಾಕಿಯ ಮೂಲಕ ನಿರೂಪಣೆಯನ್ನು ನೀಡಲಿದ್ದಾರೆ,,

ಅಂದುಕೊಂಡಿರುವಂತೆಎಲ್ಲವೂಅತ್ಯದ್ಭುತವಾಗಿ ಸಜ್ಜುಗೊಳ್ಳುತ್ತಿದ್ದು, ೬ ತಂಡಗಳನ್ನು ಪ್ರತಿನಿಧಿಸುವ ೩ ನಿರ್ಣಾಯಕರು ಮತ್ತು ರಾಯಭಾರಿಗಳ ಮುಖಾಮುಖಿಯಲ್ಲಿರೋಚಕದ ನಗೆಯ ಕಾಳಗದೊಂದಿಗೆ ನಿಮಗೆ ನಗೆ ಹಬ್ಬದೂಟ ಬಡಿಸಲು ಸಜ್ಜಾಗಿಬರ‍್ತಾಇದ್ದಾರೆಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಫ್
ಇದೇಜುಲೈ೭ರಿಂದ ಶನಿವಾರ ಮತ್ತು ಭಾನುವಾರರಾತ್ರಿ೯ಗಂಟೆಗೆ, ನಿಮ್ಮನೆಚ್ಚಿನಜೀಕನ್ನಡ ವಾಹಿನಿಯಲ್ಲಿ ನಮ್ಮಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ನಗ್ಸೋದಕ್ಕೆ ಬರ್ತಾಇದ್ದಾರೆ, ನೀವು ನಿಮ್ಮಕುಟುಂಬ ಸಮೇತ ನಗೋದಕ್ಕೆರೆಡಿಯಾಗಿರಿ,,


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ - Chitratara.com
Copyright 2009 chitratara.com Reproduction is forbidden unless authorized. All rights reserved.