ಮುಖಪುಟ /ಸುದ್ದಿ ಸಮಾಚಾರ   
      

ಡಾ.ಚಿ.ಮೂ.ಗೆ ಗೌರವ ಡಾಕ್ಟರೇಟ್ ಪ್ರದಾನ

Chidanandamurthyಬೆಂಗಳೂರು, ಫೆ. ೧೫ : ಸಂಶೋಧಕ ಡಾ. ಚಿದಾನಂದ ಮೂರ್ತಿ ಕೋಮುವಾದಿ ಹೀಗಾಗಿ ಅವರು ಗೌರವ ಡಾಕ್ಟರೇಟ್‌ಗೆ ಅರ್ಹರಲ್ಲ ಎಂದು ಹೇಳಿದ್ದ ರಾಜ್ಯಪಾಲರೇ ಇಂದು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಅಪರೂಪದ ಘಟನೆ ನಡೆಯಿತು.

ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧಕ, ಸಾಹಿತಿ ಡಾ. ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಶಿಫಾರಸ್ಸು ಮಾಡಿ ಕಳುಹಿಸಿದ್ದ ಪತ್ರಕ್ಕೆ ಸಹಿ ಹಾಕಿದ ಕೆಲವೇ ಕ್ಷಣದಲ್ಲಿ, ಅದನ್ನು ಹಿಂಪಡೆದು ಸುದ್ದಿಯಾಗಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಸಾರ್ವಜನಿಕರ, ಸಾಹಿತಿಗಳ ಹಾಗೂ ಸರ್ಕಾರದ ಪ್ರತಿರೋಧಕ್ಕೆ ಒತ್ತಡಕ್ಕೆ ಮಣಿದು ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಸಮ್ಮತಿಸಿದ್ದರು.

ಇಂದು ನಗರದಲ್ಲಿ ನಡೆದ  ಪಾತ್ರರಾದ ಬೆಂಗಳೂರು ವಿಶ್ವವಿದ್ಯಾಲಯದ ೪೬ನೇ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿಗಳೂ ಆದ ರಾಜ್ಯಪಾಲರು ಚಿದಾನಂದಮೂರ್ತಿ, ನಿತ್ಯೋತ್ಸವದ ಕವಿ ಪ್ರೊ. ನಿಸ್ಸಾರ್ ಅಹ್ಮದ್, ಚಿತ್ರಕಲಾವಿದ ಬಿ.ಕೆ.ಎಸ್. ವರ್ಮಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 

 ಮುಖಪುಟ /ಸುದ್ದಿ ಸಮಾಚಾರ