Sun Wiki Publisher/com.sun.wiki-publisher/wiki.xhpWiki;Sun Wiki PublisherSun Wiki Publisherextensions;MediaWikiSun Wiki PublisherSun Wiki Publisher ಅನ್ನು ಬಳಸಿಕೊಂಡು ನಿಮ್ಮ ಈಗಿನ ರೈಟರ್ ದಸ್ತಾವೇಜನ್ನು ಮೀಡಿಯಾವಿಕಿಗೆ ಅಪ್ಲೋಡ್ ಮಾಡಬಹುದು. ಅಪ್ಲೋಡ್ ಮಾಡಿದ ನಂತರ, ಎಲ್ಲಾ ವಿಕಿ ಬಳಕೆದಾರರು ವಿಕಿಯಲ್ಲಿನ ನಿಮ್ಮ ದಸ್ತಾವೇಜನ್ನು ಓದಬಹುದಾಗಿದೆ. ನಿಮ್ಮ ಈಗಿನ ರೈಟರ್ ದಸ್ತಾವೇಜನ್ನು ಮೀಡಿಯಾವಿಕಿ ಪರಿಚಾರಕಕ್ಕೆ ಅಪ್ಲೋಡ್ ಮಾಡಲು ಕಡತ - ಕಳುಹಿಸು - ಮೀಡಿಯಾವಿಕಿಗೆ ಅನ್ನು ಆಯ್ಕೆ ಮಾಡಿ.ವ್ಯವಸ್ಥೆಯ ಅವಶ್ಯಕತೆಗಳುಸ್ಟಾರ್ಆಫೀಸ್/ಸ್ಟಾರ್ ಸೂಟ್ ೮ ಅಪ್ಡೇಟ್ ೧೦OpenOffice.org ೨.೪ಜಾವಾ ರನ್ಟೈಮ್ ಎನ್ವಿರಾನ್ಮೆಂಟ್ ೧.೪ಮೀಡಿಯಾವಿಕಿ ಪರಿಚಾರಕದಲ್ಲಿ ಬೆಂಬಲಲಿತವಾದ ಒಂದು ವಿಕಿ ಖಾತೆSun Wiki Publisher ಅನುಸ್ಥಾಪಿಸಲಾಗುತ್ತಿದೆSun Wiki Publisher ಅನ್ನು ಅನುಸ್ಥಾಪಿಸುವ ಮೊದಲು, ಸ್ಟಾರ್ಆಫೀಸ್ ಅಥವ OpenOffice.org ಒಂದು ಜಾವಾ ರನ್ಟೈಮ್ ಎನ್ವಿರಾನ್ಮೆಂಟನ್ನು (JRE) ಬಳಸುತ್ತದೆಯೆ ಎಂದು ಖಚಿತಪಡಿಕೊಳ್ಳಿ. JRE ಯ ಸ್ಥಿತಿಯನ್ನು ಪರೀಕ್ಷಿಸಲು, ಉಪಕರಣಗಳು - ಆಯ್ಕೆಗಳು - ಸ್ಟಾರ್ಆಫೀಸ್/OpenOffice.org - ಜಾವಾ ಅನ್ನು ಆಯ್ಕೆ ಮಾಡಿ. "ಒಂದು ಜಾವಾ ರನ್ಟೈಮ್ ಎನ್ವಿರಾನ್ಮೆಂಟನ್ನು ಬಳಸು" ಎನ್ನುವುದನ್ನು ಗುರುತು ಹಾಕಲಾಗಿದೆ ಹಾಗು ದೊಡ್ಡ ಪಟ್ಟಿಚೌಕದಲ್ಲಿನ ಜಾವಾ ರನ್ಟೈಮ್ ಕಡತಕೋಶವನ್ನು ಆಯ್ಕೆ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಯಾವುದೆ JRE ಸಕ್ರಿಯಗೊಂಡಿರದೆ ಇದ್ದ ಪಕ್ಷದಲ್ಲಿ, ಒಂದು JRE ೧.೪ ಅಥವ ಮುಂದಿನದನ್ನು ಆಯ್ಕೆ ಮಾಡಿ ಹಾಗು ಸ್ಟಾರ್ಆಫೀಸ್/OpenOffice.org ಅನ್ನು ಮರಳಿ ಆರಂಭಿಸಿ.Sun Wiki Publisher ನ ಅನುಸ್ಥಾಪನೆರೈಟರ್ ಕಿಟಕಿಯಲ್ಲಿ, ಉಪಕರಣಗಳು - ವಿಸ್ತರಣೆ ವ್ಯವಸ್ಥಾಪಕ ಅನ್ನು ಆಯ್ಕೆ ಮಾಡಿ.ವಿಸ್ತರಣೆ ವ್ಯವಸ್ಥಾಪಕ ಸಂವಾದದಲ್ಲಿ, ಸೇರಿಸು ಅನ್ನು ಕ್ಲಿಕ್ಕಿಸಿ.Sun Wiki Publisher.oxt ಕಡತವನ್ನು ಹುಡುಕಿ, ತೆರೆ ಅನ್ನು ಕ್ಲಿಕ್ಕಿಸಿ, ನಂತರ ಮುಚ್ಚು ಕ್ಲಿಕ್ ಮಾಡಿ. ಸ್ಟಾರ್ಆಫೀಸ್/ಸ್ಟಾರ್-ಸೂಟ್/OpenOffice.org ಅನ್ನು ಮುಚ್ಚಿ, ಹಾಗು ಕ್ವಿಕ್ಸ್ಟಾರ್ಟರ್ಶಕ್ತಗೊಂಡಿದಲ್ಲಿ ಅದನ್ನೂ ಸಹ ಮುಚ್ಚಿ.ತಂತ್ರಾಂಶವನ್ನು ಮರಳಿ ಪ್ರಾರಂಭಿಸಿ, ಒಂದು ಪಠ್ಯ ದಸ್ತಾವೇಜನ್ನು ತೆರೆಯಿರಿ, ನಂತರ ನಿಮ್ಮ ವಿಕಿ ಸಿದ್ಧತೆಗಳನ್ನು ದಾಖಲಿಸಲು ಉಪಕರಣಗಳು - ಆಯ್ಕೆಗಳು - ಅಂತರ್ಜಾಲ - ಮೀಡಿಯಾವಿಕಿ ಅನ್ನು ಆಯ್ಕೆ ಮಾಡಿ. ಕೆಳಗೆ ಕಾಣುವ "To ವಿಕಿಯೊಂದಿಗೆ ಸಂಪರ್ಕ ಹೊಂದಲು" ಅನ್ನು ನೋಡಿ.Sun Wiki Publisher ತೆಗೆದು ಹಾಕಲುರೈಟರ್ ಕಿಟಕಿಯಲ್ಲಿ, ಉಪಕರಣಗಳು - ವಿಸ್ತರಣೆ ವ್ಯವಸ್ಥಾಪಕ ಅನ್ನು ಆಯ್ಕೆ ಮಾಡಿ.ನನ್ನ ವಿಸ್ತರಣೆಗಳ ಎದುರಿನಲ್ಲಿರುವ ಪ್ಲಸ್ ಚಿಹ್ನೆಯನ್ನು (+) ಕ್ಲಿಕ್ ಮಾಡಿ.ವಿಸ್ತರಣೆಯನ್ನು ಆಯ್ಕೆ ಮಾಡಿ, ತೆಗೆದು ಹಾಕು ಅನ್ನು ಕ್ಲಿಕ್ಕಿಸಿ, ಹಾಗು ನಂತರ ಮುಚ್ಚು ಅನ್ನು ಕ್ಲಿಕ್ಕಿಸಿ.ವಿಕಿಯೊಂದಿಗೆ ಸಂಪರ್ಕ ಹೊಂದಲುಸೂಚನೆ: ಎಲ್ಲಾ ಆಯಾಯ ಸಂವಾದಗಳಿಗಾಗಿ ಸ್ಟಾರ್ಆಫೀಸ್/OpenOffice.org ನ ಒಳಗೆ ನಿಮ್ಮ ಬಳಕೆದಾರ ಹೆಸರು ಹಾಗು ಗುಪ್ತಪದವನ್ನು ಶೇಖರಿಸಿ ಇಡಬಹುದು. ಗುಪ್ತಪದವನ್ನು ಸುರಕ್ಷತ ರೀತಿಯಲ್ಲಿ ಶೇಖರಿಸಿ ಇಡಲಾಗುವುದು, ಇಲ್ಲಿ ಒಂದು ಮಾಸ್ಟರ್ ಗುಪ್ತಪದದ ಮೂಲಕೆ ನಿಲುಕಣೆಯನ್ನು ಒದಗಿಸಲಾಗುವುದು. ಮಾಸ್ಟರ್ ಗುಪ್ತಪದವನ್ನು ಶಕ್ತಗೊಳಿಸಲು, ಉಪಕರಣಗಳು - ಆಯ್ಕೆಗಳು - ಸ್ಟಾರ್ಆಫೀಸ್/OpenOffice.org - ಸುರಕ್ಷತೆ ಅನ್ನು ಆಯ್ಕೆ ಮಾಡಿ.ಸೂಚನೆ: ಒಂದು ಪ್ರಾಕ್ಸಿ ಪರಿಚಾರಕದ ಮೂಲಕ ನೀವು ಜಾಲದೊಂದಿಗೆ ಸಂಪರ್ಕವನ್ನು ಹೊಂದುವುದಾದಲ್ಲಿ, ಉಪಕರಣಗಳು - ಆಯ್ಕೆಗಳು - ಅಂತರ್ಜಾಲ - ಪ್ರಾಕ್ಸಿಗಾಗಿನ ಪ್ರಾಕ್ಸಿ ಮಾಹಿತಿಯನ್ನು ನಮೂದಿಸಿ, ನಂತರ ತಂತ್ರಾಂಶವನ್ನು ಮರಳಿ ಆರಂಭಿಸಿ.ಒಂದು ರೈಟರ್ ದಸ್ತಾವೇಜನ್ನು ತೆರೆಯಿರಿ, ಹಾಗು ಉಪಕರಣಗಳು - ಆಯ್ಕೆಗಳು - ಅಂತರ್ಜಾಲ - ಮೀಡಿಯಾವಿಕಿ ಅನ್ನು ಆಯ್ಕೆ ಮಾಡಿ.ಆಯ್ಕೆಗಳು ಸಂವಾದದಲ್ಲಿ, ಸೇರಿಸು ಅನ್ನು ಕ್ಲಿಕ್ಕಿಸಿ.ಮೀಡಿಯಾವಿಕಿ ಸಂವಾದದಲ್ಲಿ, ವಿಕಿಗಾಗಿನ ಖಾತೆ ಮಾಹಿತಿಯನ್ನು ಒದಗಿಸಿ.ಈ URL ಪಠ್ಯಚೌಕದಲ್ಲಿ, ನೀವು ಯಾವ ಒಂದು ವಿಕಿಯೊಂದಿಗೆ ಸಂಪರ್ಕಹೊಂದಲು ಬಯಸುತ್ತೀರೋ ಅದರ ವಿಳಾಸವನ್ನು ನಮೂದಿಸಿ.ನೀವು ಜಾಲ ವೀಕ್ಷಕದಿಂದ URL ಅನ್ನು ನಕಲಿಸಬಹುದು ಹಾಗು ಅದನ್ನು ಪಠ್ಯಚೌಕದಲ್ಲಿ ಅಂಟಿಸಬಹುದು.ಬಳಕೆದಾರನ ಹೆಸರು ನಮೂದಿಸುವ ಜಾಗದಲ್ಲಿ, ನಿಮ್ಮ ವಿಕಿ ಖಾತೆಯ ಬಳಕೆದಾರನ ಐಡಿಯನ್ನು ನಮೂದಿಸಿ.ವಿಕಿಯನ್ನು ಅನಾಮಧೇಯವಾಗಿ ನಿಲುಕಿಸಿಕೊಳ್ಳಲು ಅನುಮತಿ ಇದ್ದಲ್ಲಿ ಬಳಕೆದಾರ ಹೆಸರು ಹಾಗು ಗುಪ್ತಪದದ ಚೌಕಗಳನ್ನು ಖಾಲಿ ಬಿಡಬಹುದು.ಗುಪ್ತಪದ ನಮೂದಿಸುವ ಜಾಗದಲ್ಲಿ, ನಿಮ್ಮ ವಿಕಿ ಖಾತೆಯ ಗುಪ್ತಪದವನ್ನು ನಮೂದಿಸಿ ನಂತರ ಸರಿ ಅನ್ನು ಕ್ಲಿಕ್ಕಿಸಿ.ಐಚ್ಛಿಕವಾಗಿ ನೀವು ಅಧಿವೇಶನಗಳ ನಡುವೆ ಗುಪ್ತಪದಗಳನ್ನು ಉಳಿಸಲು "ಗುಪ್ತಪದವನ್ನು ಉಳಿಸು" ಅನ್ನು ಶಕ್ತಗೊಳಿಸಬಹುದು. ಉಳಿಸಲಾದ ಎಲ್ಲಾ ಗುಪ್ತಪದಗಳನ್ನು ನಿಲುಕಿಸಿಕೊಳ್ಳಲು ಒಂದು ಮಾಸ್ಟರ್ ಗುಪ್ತಪದವನ್ನು ಬಳಸಲಾಗುವುದು. ಮಾಸ್ಟರ್ ಗುಪ್ತಪದವನ್ನು ಶಕ್ತಗೊಳಿಸಲು ಉಪಕರಣಗಳು - ಆಯ್ಕೆಗಳು - ಸ್ಟಾರ್ಆಫೀಸ್/OpenOffice.org - ಸುರಕ್ಷತೆ ಅನ್ನು ಬಳಸಿ. ಮಾಸ್ಟರ್ ಗುಪ್ತಪದವನ್ನು ಶಕ್ತಗೊಳಿಸದೆ ಇದ್ದಲ್ಲಿ "ಗುಪ್ತಪದವನ್ನು ಉಳಿಸು" ಯು ಲಭ್ಯವಿರುವುದಿಲ್ಲ.ಹೊಸದಾದ ವಿಕಿ ಹಾಳೆಯನ್ನು ಸೃಷ್ಟಿಸಲುಒಂದು ರೈಟರ್ ದಸ್ತಾವೇಜನ್ನು ತೆರೆಯಿರಿ.ವಿಕಿ ಪುಟದಲ್ಲಿನ ವಿಷಯಗಳನ್ನು ಬರೆಯಿರಿ. ರಚನೆಗಳು, ಶೀರ್ಷಿಕೆಗಳು, ಅಡಿಲೇಖಗಳು, ಹಾಗು ಇನ್ನೂ ಹಲವು ರಚನಾ ಸವಲತ್ತುಗಳನ್ನು ನೀವು ಇಲ್ಲಿ ಬಳಸಿಕೊಳ್ಳಬಹುದಾಗಿದೆ. ಬೆಂಬಲವಿರುವ ಎಲ್ಲಾ ರಚನೆಗಳ ಪಟ್ಟಿಗೆಗಾಗಿ ಇದನ್ನು ನೋಡಿ.ಕಡತ - ಕಳುಹಿಸು - ಮೀಡಿಯಾವಿಕಿಗೆ ಅನ್ನು ಆಯ್ಕೆ ಮಾಡಿ.ಮೀಡಿಯಾವಿಕಿಗೆ ಕಳುಹಿಸು ಸಂವಾದದಲ್ಲಿ, ನಿಮ್ಮ ನಮೂದಿನ ಸಿದ್ಧತೆಗಳನ್ನು ಸೂಚಿಸಿ.ಮೀಡಿಯಾವಿಕಿ ಪರಿಚಾರಕ: ವಿಕಿಯನ್ನು ಆಯ್ಕೆ ಮಾಡಿ.ಶೀರ್ಷಿಕೆ: ನಿಮ್ಮ ಪುಟದ ಶೀರ್ಷಿಕೆಯನ್ನು ನಮೂದಿಸಿ. ನಿಮ್ಮ ಈಗಿನ ದಸ್ತಾವೇಜನ್ನು ಒಂದು ವಿಕಿಯ ಮೇಲೆ ತಿದ್ದಿಬರೆಯಲು ಅದರ ಈಗಿನ ಹೆಸರನ್ನು ನಮೂದಿಸಿ. ವಿಕಿಯಲ್ಲಿ ಹೊಸ ಪುಟವನ್ನು ರಚಿಸುವಂತಿದ್ದಲ್ಲಿ ಒಂದು ಹೊಸ ಶೀರ್ಷಿಕೆಯನ್ನು ನಮೂದಿಸಿ.ಸಾರಾಂಶ: ನಿಮ್ಮ ಹಾಳೆಯ ಐಚ್ಚಿಕವಾದ ಸಂಕ್ಷಿಪ್ತವಾದ ಸಾರಾಂಶವನ್ನು ನಮೂದಿಸಿ.ಇದು ಒಂದು ಸಣ್ಣ ಬದಲಾವಣೆ: ಅಪ್ಲೋಡ್ ಮಾಡಲಾದ ಪುಟವನ್ನು ಈಗಾಗಲೆ ಇರುವ ಶೀರ್ಷಿಕೆಯನ್ನು ಹೊಂದಿರುವ ಒಂದು ಪುಟದಲ್ಲಿ ಮಾಡಲಾದ ಒಂದು ಸಣ್ಣ ಬದಲಾವಣೆ ಎಂದು ಗುರುತಿಸಲು ಈ ಚೌಕದಲ್ಲಿ ಗುರುತು ಹಾಕಿ.ಜಾಲ ವೀಕ್ಷಕದಲ್ಲಿ ತೋರಿಸು: ನಿಮ್ಮ ಗಣಕದ ಜಾಲ ವೀಕ್ಷಕವನ್ನು ತೆರೆಯಲು ಹಾಗು ಅಪ್ಲೋಡ್ ಮಾಡಲಾದ ವಿಕಿ ಪುಟವನ್ನು ನೋಡಲು ಇದನ್ನು ಕ್ಲಿಕ್ಕಿಸಿ.ಕಳುಹಿಸಿ ಅನ್ನು ಕ್ಲಿಕ್ಕಿಸಿ.