ನೀವೂ ಸಹಾಯ ಮಾಡಲು ಬಯಸುತ್ತೀರೆ? ಬಹಳ ಸಂತೋಷ! ನೀವದಕ್ಕೆ ಒಬ್ಬ C++ ಗುರು ಆಗಬೇಕೆಂದಿಲ್ಲ (ಅಥವ ಅದರ ಗಂಧಗಾಳಿಯೆ ಗೊತ್ತಿರದೆ ಇದ್ದರೂ ಚಿಂತೆ ಇಲ್ಲ!) ಹಾಗು ಅದಕ್ಕಾಗಿ ನೀವು ಬಹಳ ಸಮಯ ವ್ಯಯಿಸಬೇಕಾಗಿಲ್ಲ.
ನೀವು ಪಾಲ್ಗೊಳ್ಳಲು ಕೆಲವು ಸುಲಭ ಮಾರ್ಗಗಳು
- ನಿಮ್ಮ ಕುಟುಂಬದವರಿಗೆ, ಗೆಳೆಯರಿಗೆ ಹಾಗು ನಿಮ್ಮ ಸಹೋದ್ಯೋಗಿಗಳಿಗೆ ಮೋಝಿಲ್ಲಾ ಹಾಗು ಅದರ ಉತ್ಪನ್ನದ ಬಗ್ಗೆ ತಿಳಿಸಿ
- ನಮ್ಮ ಮೆಸೇಜ್ ಬೋರ್ಡುಗಳಲ್ಲಿ ಹಾಗು ಬೆಂಬಲ ವೇದಿಕೆಗಳಲ್ಲಿನ ಇತರರಿಗೆ ಸಹಾಯ ಮಾಡಿ
- ಸಮುದಾಯ ಮಾರ್ಕೆಟಿಂಗ್ ತಂಡಕ್ಕೆ ಸೇರ್ಪಡೆಗೊಂಡು ನಮ್ಮಮೂಲಭೂತ ಪ್ರಚಾರಗಳಿಗೆ ಸಹಾಯ ಮಾಡಿ
- ವಿಕಸನಾ ತಂಡಕ್ಕೆ ಪ್ರತಿಬಾರಿಯೂ ಕುಸಿತ(ಕ್ರಾಶ್) ವರದಿಯನ್ನು ಸಲ್ಲಿಸಲು ಮರೆಯದಿರಿ
- ಮೋಝಿಲ್ಲಾ ಉತ್ಪನ್ನದೊಂದಿಗೆ ಸಮರ್ಪಕವಾಗಿ ಕೆಲಸ ಮಾಡದ ಜಾಲ ತಾಣಗಳನ್ನು ಸಂಪರ್ಕಿಸಿ
- ಮೋಝಿಲ್ಲಾ ಫೌಂಡೇಶನ್ಗೆ ದೇಣಿಗೆಯನ್ನು ನೀಡಿ
ತಾಂತ್ರಿಕ ನೆಲೆಯಲ್ಲಿ ಪಾಲ್ಗೊಳ್ಳಲು ಮಾರ್ಗಗಳು
- ನಮ್ಮ ಗುಣಮಟ್ಟ ಖಾತ್ರಿ(ಅಶ್ಯೂರೆನ್ಸ್) ತಂಡವನ್ನು ಸೇರಿ ಹಾಗು ಪರಿಹರಿಸಬೇಕಿರುವ ದೋಷ ಹಾಗು ಇತರೆ ತೊಂದರೆಗಳನ್ನು ವರದಿ ಮಾಡಿ
- ಅಭಿವೃದ್ದಿಕಾರರಿಗಾಗಿ ದಸ್ತಾವೇಜುಗಳನ್ನು ಬರೆಯಲು ಹಾಗು ಸಂಪಾದಿಸಲು ಸಹಾಯ ಮಾಡಿ
- ಬಳಕೆದಾರರಿಗಾಗಿನ ದಸ್ತಾವೇಜುಗಳನ್ನು ಬರೆಯಲು ಅಥವ ಸಂಪಾದಿಸಲು ಸಹಾಯ ಮಾಡಿ
- ಒಂದು ಹೆಚ್ಚುವರಿಯನ್ನು(ಆಡ್-ಆನ್) ಅಭಿವೃದ್ದಿಪಡಿಸುವ ಮೂಲಕ ಫೈರ್ಫಾಕ್ಸ್ ಪರಿಸರದ ಸಮೃದ್ಧಿಗೆ ನಿಮ್ಮ ಕಾಣಿಕೆಯನ್ನು ನೀಡಿ
- ಒಂದು ದೋಷಕ್ಕೆ ಪರಿಹಾರ ಕಂಡುಹಿಡಿಯಿರಿ ಅಥವ ಪರಿಯೋಜನೆಗೆ ಕೋಡ್ ಅನ್ನು ಒದಗಿಸಿ