ನಾವದನ್ನು ಹೇಗೆ ನಿಭಾಯಿಸುತ್ತೇವೆ?
ಬೇರೆಯರಿಂದ ಫೈರ್ಫಾಕ್ಸ್ ಹೇಗೆ ಭಿನ್ನವಾಗಿದೆ? ಮುಖ್ಯವಾಗಿ, ನಾವು ಮುಕ್ತವಾಗಿದ್ದೇವೆ. ಅಂದರೆ ಜಗತ್ತಿನ (ಹಾಗು ನಮ್ಮನ್ನು ಹಿಂದಿನಿಂದ ಸಾವಿರಾರು ನಿಪುಣರು ಗಮನಿಸುತ್ತಿದ್ದಾರೆ) ಯಾರೆ ಆದರೂ ನಮ್ಮ ಕೋಡ್ ಅನ್ನು ನೋಡಿ ಹಾಗು ನಮ್ಮ ಈ ಅಸ್ತ್ರದಲ್ಲಿನ ಯಾವುದೆ ಅಪಾಯಕಾರಿಯಾದಂತಹ ದುರ್ಬಲವಾದ ಜಾಗವನ್ನು ಕಂಡುಹಿಡಿಯಬಹುದು.
ಹಾಗು ನಾವು ಒಂದು ತೊಂದರೆಯ ಬಗ್ಗೆ ಕೇಳಿದಾಗ, ತಕ್ಷಣ ತೋಳುಗಳನ್ನು ಮಡಚಿಕೊಂಡು ಅದನ್ನು ಪರಿಹರಿಸಲು ತೊಡಗುತ್ತೇವೆ. ತೊಂದರೆಯನ್ನು ಹೊಂದಿರುವುದರಿಂದ ನಾವು ಇನ್ನೂ ಪರಿಪೂರ್ಣ ಅಲ್ಲ ಎಂದು ಸೂಚಿಸಿದರೂ ಸಹ ಅದರತ್ತ ಗಮನಹರಿಸುವುದು ನಿಮ್ಮ ಆಸಕ್ತಿಗೆ (ಹಾಗೆಯೆ ನಮಗೂ ಕೂಡ) ಒಳ್ಳೆಯದು.
ಒಟ್ಟಿನಲ್ಲಿ, ನಿಮ್ಮ ಸುರಕ್ಷತೆಯೆ ನಮ್ಮ ಪ್ರಮುಖ ಆದ್ಯತೆ.
ನಮ್ಮ ಹುಚ್ಚುತನಕ್ಕೂ ಒಂದು ವಿಧಾನವಿದೆ.
ಅಂತರ್ಜಾಲವನ್ನು ನಮ್ಮಷ್ಟು ಬೇರಾರೂ ಇಷ್ಟಪಡುವುದಿಲ್ಲ. ಆದರೆ ಸ್ಕಾಮ್ ಮಾಡುವವರು, ಸ್ಪಾಮ್ ಮಾಡುವವರು ಹಾಗು ಟ್ರಿಗರ್-ಹ್ಯಾಪಿ ವೈರಸ್ಗಳು ನಿಜವಾದ ಶತ್ರುಗಳು, ಆದ್ದರಿಂದ ನೀವು ಜಾಲವನ್ನು ಬಳಸುವಾಗ ಇವುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು.
ಫೈರ್ಫಾಕ್ಸ್ ಹುಟ್ಟಿದ್ದೆ ಅಲ್ಲಿ.
ಜಾಲವನ್ನು ಜಾಲಾಡಲು ಇದನ್ನು ಬಳಸುವುದು ಒಂದು ಸುರಕ್ಷಿತ ವಿಧಾನ ಏಕೆಂದರೆ:
- ನಾವು ಕೇವಲ ತೊಂದರೆಯನ್ನು ಮಾತ್ರ ಪರಿಹರಿಸಲು ಪ್ರಯತ್ನಿಸುವುದಿಲ್ಲ.ನಿಮ್ಮ ಜಾಲ ವೀಕ್ಷಣೆಯನ್ನು ಸುರಕ್ಷಿತವಾಗಿರಿಸಲು ಜಗತ್ತಿನಾದ್ಯಂತದ ಸುರಕ್ಷಿತಾ ಪರಿಣಿತರ ಒಂದು ಅಂತರಾಷ್ಟ್ರೀಯ ಸಮುದಾಯವು ಹಗಲೂ ರಾತ್ರಿ ದುಡಿಯುತ್ತಿದ್ದಾರೆ (ಮುಕ್ತಆಕರ ಮಾದರಿಯಲ್ಲಿ ನಾವು ಕೆಲಸ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ). ಇದು ನಿಮ್ಮ ಮನೆಯ ಸುತ್ತಮುತ್ತ ಒಂದು ಉನ್ನತವಾಗಿ ತರಬೇತಿ ಪಡೆದ ದಂಡೊಂದು ಗಸ್ತು ತಿರುಗುತ್ತಿದ್ದಂತೆ ಕೆಲಸ ಮಾಡುತ್ತದೆ.
- ನಮ್ಮ ದಾರಿಯ ಪ್ರತಿಯೊಂದು ಹಂತದಲ್ಲೂ ನಿಮ್ಮ ಸುರಕ್ಷತೆಯ ಮೇಲೆ ಗಮನವಿರಿಸುತ್ತೇವೆ.ಸುರಕ್ಷತಾ ಪರಿಣಿತರು ಒಂದು ಸಾಲು ಕೋಡ್ ಅನ್ನು ಬರೆಯುವ ಮೊದಲು ಸಂದಿಗ್ಧ ತೊಂದರೆಗಳ ಪತ್ತೆ ಹಾಗು ಪರಿಹಾರವನ್ನು ಗಮನದಲ್ಲಿಟ್ಟುಕೊಂಡೆ ಮುಂದುವರೆಯುತ್ತವೆ.
- ನಾವು ಸದಾ ತೊಂದರೆಯನ್ನು ಗಮನಿಸುತ್ತಿರುತ್ತೇವೆ.ನಾವು ಅಪಾಯಗಳನ್ನು ಸದಾ ಗಮನಿಸುತ್ತಿರುತ್ತೇವೆ ಹಾಗು ಅವುಗಳಿಗಿಂದ ಒಂದು ಹೆಜ್ಜೆ ಮುಂದೆ ಇರಲು ಫೈರ್ಫಾಕ್ಸ್ನ ಹೊಸ ಅಪ್ಡೇಟ್ಗಳನ್ನು ಬಿಡುಗಡೆ ಮಾಡುತ್ತಿರುತ್ತೇವೆ. ಒಂದು ಮುಕ್ತ ಆಕರ ಜಗತ್ತಿನಲ್ಲಿ ಕೆಲಸ ಮಾಡುವುದರಿಂದ ಆಗುವ ಒಂದು ಅನುಕೂಲವೆಂದರೆ ಯಾರಾದರೂ ನಮ್ಮಲ್ಲಿನ ದುರ್ಬಲತೆಗಳನ್ನು ಪತ್ತೆ ಮಾಡಲು ಹಾಗು ಅದನ್ನು ನಿವಾರಿಸಲು ಸಹಾಯ ಮಾಡುತ್ತಾರೆ.
ಫೈಫಾಕ್ಸ್ ನಿಮ್ಮನ್ನು ಅಂತರ್ಜಾಲದಲ್ಲಿ ಹೇಗೆ ಸುರಕ್ಷತವಾಗಿ ಇಡುತ್ತದೆ ಎನ್ನುವುದರ ಬಗ್ಗೆ ಇನ್ನಷ್ಟು ವಿವರಗಳಿಗಾಗಿ, ನಮ್ಮ ಸುರಕ್ಷತಾ ಬ್ಲಾಗ್ ಅನ್ನು ನೋಡಿ