ಆರಂಭಿಗ
ಹಿಗ್ಗಿಸಿ, ಕುಗ್ಗಿಸಿ
ಸಣ್ಣ ಸಣ್ಣ ಅಕ್ಷರದಿಂದ ಬೇಸತ್ತಿರುವಿರೇನು? ಚಿತ್ರಗಳನ್ನು ದೊಡ್ಡದಾಗಿ ಹಾಗು ಹತ್ತಿರದಿಂದ ನೋಡಬೇಕೇನು? ನೀವು ಈಗ ಜಾಲ ಪುಟಗಳನ್ನು ದೊಡ್ಡದು ಹಾಗು ಚಿಕ್ಕದಾಗಿಸಬಹುದು.
ಈ 'ಹಾಳೆ' ಉಪಾಯಗಳನ್ನು ಬಳಸಿ ನೋಡಿ
ನೀವು ಒಮ್ಮೆಲೆ ಹಲವಾರು ಜಾಲಪುಟಗಳನ್ನು ತೆರೆಯುವ ಅಭ್ಯಾಸವನ್ನು ಹೊಂದಿದ್ದರೆ, ಹಾಳೆಯನ್ನು ಬಳಸಿಕೊಂಡು ವೀಕ್ಷಿಸುವುದು ನಿಮಗೆ ಖಂಡಿತ ಪ್ರಯೋಜನಕಾರಿಯಾಗುತ್ತದೆ. ಹಾಳೆಗಳ ಬಗ್ಗೆ ನೀವು ಪರಿಣಿತಿಯನ್ನು ಹೊಂದಲು ಈ ಕೆಳಗಿನ ಕೀಲಿಮಣೆ ಶಾರ್ಟ್-ಕಟ್ಗಳು ನಿಮಗೆ ಬಹಳಷ್ಟು ಸಹಾಯವಾಗುತ್ತದೆ:
ಒಂದೇ ಕ್ಲಿಕ್ನಲ್ಲಿ ಬುಕ್ಮಾರ್ಕುಗಳನ್ನು ಸೇರಿಸಿ
ಕೇವಲ ಒಂದು ಕ್ಲಿಕ್ಕಿನಲ್ಲಿ ಬುಕ್ಮಾರ್ಕ್ ಮಾಡುವ ಮೂಲಕ ನಿಮ್ಮ ಇಷ್ಟದ ತಾಣಗಳತ್ತ ಒಂದು ಕಣ್ಣನ್ನು ಇರಿಸಿ (ಹಾಗು ಸಮಯವನ್ನೂ ಸಹ ಉಳಿಸಿ). ನೀವು ಯಾವುದಾದರು ಪುಟವನ್ನು ಅದನ್ನು ನೆನಪಿಟ್ಟುಕೊಳ್ಳಲು ಬಯಸಿದಲ್ಲಿ ಅದಕ್ಕೆ ಭೇಟಿಕೊಟ್ಟಾಗ ತಾಣ ಪಟ್ಟಿಯಲ್ಲಿನ (ಲೊಕೇಶನ್ ಬಾರ್) ನಕ್ಷತ್ರ ಚಿಹ್ನೆಯ ಮೇಲೆ ಕ್ಲಿಕ್ಕಿಸಿ. ಮುಂದಿನ ಬಾರಿ ಅದನ್ನು ನೀವು ಸುಲಭವಾಗಿ ಪತ್ತೆಹಚ್ಚುವಂತೆ ಫೈರ್ಫಾಕ್ಸ್ ಅದನ್ನು ನಿಮ್ಮ ಬುಕ್ಮಾರ್ಕುಗಳ ಪಟ್ಟಿಗೆ ಸೇರಿಸುತ್ತದೆ.
- =buildPlatformImage('/img/tignish/tips/security-icon-01.png', 'Security Icon', '60', '53', null, array('mac', 'linux', 'xp'))?> ಈ ತಾಣವು ಪರಿಶೀಲಿಸಲ್ಪಟ್ಟ ಗುರುತು ಮಾಹಿತಿಯನ್ನು ಒದಗಿಸುತ್ತದೆ, ಹಾಗು ನಿಮ್ಮ ಖಾಸಗಿ ದತ್ತಾಂಶವನ್ನು ಅಂತರ್ಜಾಲ ಕಳ್ಳರಿಂದ ಸಂರಕ್ಷಿಸುತ್ತದೆ.
- =buildPlatformImage('/img/tignish/tips/security-icon-02.png', 'Security Icon', '60', '53', null, array('mac', 'linux', 'xp'))?> ಈ ತಾಣವು ಮೂಲ ಗುರುತು ಮಾಹಿತಿಯನ್ನು ಒದಗಿಸುತ್ತದೆ, ಹಾಗು ನಿಮ್ಮ ಖಾಸಗಿ ದತ್ತಾಂಶವನ್ನು ಅಂತರ್ಜಾಲ ಕಳ್ಳರಿಂದ ಸಂರಕ್ಷಿಸುತ್ತದೆ.
- =buildPlatformImage('/img/tignish/tips/security-icon-03.png', 'Security Icon', '60', '53', null, array('mac', 'linux', 'xp'))?> ಈ ತಾಣವು ಯಾವುದೆ ಗುರುತು ಮಾಹಿತಿಯನ್ನು ಒದಗಿಸುವುದಿಲ್ಲ.
ನೀವು ಯಾರೊಂದಿಗೆ ವ್ಯವಹರಿಸುತ್ತಿದ್ದೀರೆಂದು ತಿಳಿಯಿರಿ
ಜಾಲದಲ್ಲಿನ ಮೋಸಗಾರರ ಸರ್ವೆಸಾಮಾನ್ಯವಾದ ವಿಧಾನವೆಂದರೆ ನಿಮ್ಮ ಬ್ಯಾಂಕ್ನವರಂತೆ, ನಿಮ್ಮ ಮೆಚ್ಚಿನ ಇ-ಕಾಮರ್ಸ್ ತಾಣ ಮುಂತಾದುವುಗಳಂತೆ ಸೋಗು ಹಾಕುವ, ಫಿಶಿಂಗ್ ತಾಣಗಳೆಂದು ಕರೆಯಲ್ಪಡುವ ನಕಲಿ ತಾಣಗಳನ್ನು ನಿರ್ಮಿಸುವುದು. ಆದರೆ ಅದೃಷ್ಟವಶಾತ್, ತಾಣಗಳು ತಾವು ಹೇಳಿಕೊಂಡಂತೆ ಇವೆಯೆ ಎಂದು ನಿರ್ಧರಿಸುವುದನ್ನು ಫೈರ್ಫಾಕ್ಸ್ ಸುಲಭವಾಗಿಸುತ್ತದೆ- ಒಂದು ತಕ್ಷಣದ ಗುರುತು ಮಾಹಿತಿಯನ್ನು ನೋಡಲು ತಾಣದ ಚಿಹ್ನೆಯ ಮೇಲೆ ಕ್ಲಿಕ್ಕಿಸಿ.
ಒಂದು ಆಕ್ರಮಿತ ತಾಣ ಅಥವ ನಕಲಿ; ಈ ತಾಣಕ್ಕೆ ನಿಮ್ಮ ಖಾಸಗಿ ಮಾಹಿತಿಯನ್ನು ಒದಗಿಸುವುದು, ಅಥವ ಭೇಟಿಕೊಡುವುದೂ ಸಹ ಅಪಾಯಕಾರಿಯಾಗಬಹುದು.
ನಿಮ್ಮ ಯಶಸ್ಸಿಗೆ ಸುಲಭ ಮಾರ್ಗ
ನಿಮ್ಮ ಬದುಕನ್ನು ಸುಲಭಗೊಳಿಸಲು ಫೈರ್ಫಾಕ್ಸ್ ಅನೇಕ ಕೀಲಿಮಣೆ ಶಾರ್ಟ್-ಕಟ್ಗಳನ್ನು ಹೊಂದಿದೆ. ನಮ್ಮ ನೆಚ್ಚಿನವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ:
ಮಧ್ಯಮ
ಟ್ಯಾಗ್ ಅನ್ನು ಬಳಸಿ
ಒಮ್ಮೆ ನೀವು ಬುಕ್ಮಾರ್ಕುಗಳ ಒಂದು ದೊಡ್ಡ ಪಟ್ಟಿಯನ್ನು ಮಾಡಿದರೆಂದರೆ, ಅವೆಲ್ಲವನ್ನೂ ಗಮನಿಸುತ್ತಿರುವುದು ಸ್ವಲ್ಪ ಕಷ್ಟದ ಕೆಲಸವೆ ಸರಿ. ಇವನ್ನು ವ್ಯವಸ್ಥಿತವಾಗಿರಿಸಲು, ನೀವು ಬುಕ್ಮಾರ್ಕ್ ಮಾಡಲಾದ ತಾಣಗಳಿಗೆ ಟ್ಯಾಗ್ಗಳನ್ನು ನೀಡಬಹುದು: ನಕ್ಷತ್ರ ಚಿಹ್ನೆಯ ಮೇಲೆ ಎರಡು ಬಾರಿ ಕ್ಲಿಕ್ಕಿಸಿದರಾಯಿತು, ನಿಮ್ಮ ಟ್ಯಾಗ್ ಅನ್ನು ನಮೂದಿಸುವಂತೆ ಕೇಳಲಾಗುತ್ತದೆ.
ನೀವು ಒಂದು ತಾಣಕ್ಕೆ ನಿಮ್ಮ ಮನಸ್ಸಿಗೆ ಬಂದಷ್ಟು ಟ್ಯಾಗ್ಗಳನ್ನು ನಮೂದಿಸಬಹುದು(ಟ್ಯಾಗ್ಗಳ ನಡುವೆ ವಿರಾಮಚಿಹ್ನೆಯನ್ನು ನಮೂದಿಸಲು ಮರೆಯದಿರಿ), ಹಾಗು ಮುಂದೆ ನೀವು ಆ ತಾಣವನ್ನು ನೋಡಬೇಕೆಂದಾಗ ಈ ಟ್ಯಾಗ್ ಅನ್ನು ಸ್ಥಳ ಪಟ್ಟಿಕೆಯಲ್ಲಿ ನಮೂದಿಸಿದರಾಯಿತು. ಉದಾಹರಣೆಗೆ, "travel" ಅನ್ನು ಸ್ಥಳ ಪಟ್ಟಿಕೆಯಲ್ಲಿ ನಮೂದಿಸಿದಾಗ ನೀವು ರಜಾದಿನಗಳ ಅಡಿಯಲ್ಲಿ ಬುಕ್ಮಾರ್ಕ್ ಮಾಡಲಾದ ಎಲ್ಲಾ ತಾಣಗಳ ಪಟ್ಟಿಯನ್ನು ತೋರಿಸಲಾಗುತ್ತದೆ.
ಎಲ್ಲಾ ಆಡ್-ಆನ್ಗಳ ಬಗ್ಗೆ ತಿಳಿಯಿರಿ
ಫೈರ್ಪಾಕ್ಸ್ನ ಸಾಮಾನ್ಯ ಆವೃತ್ತಿಯು ಬಹಳ ಸವಲತ್ತುಗಳನ್ನು ಒಳಗೊಂಡಿರುವುದು ನಿಜ. ಆದರೆ ಅಷ್ಟಕ್ಕೆ ಏಕೆ ನೀವು ಸುಮ್ಮನಾಗಬೇಕು? 5,000 ಆಡ್-ಆನ್ಗಳು ಇವೆ — ಇವು ಫೈರ್ಫಾಕ್ಸ್ ಕಸ್ಟಮೈಸ್ ಮಾಡುವುದಕ್ಕಿಂತ ಒಂದಿಷ್ಟು ಹೆಚ್ಚಿನದನ್ನು ಮಾಡುತ್ತವೆ—ಇದು ನೀವು ಯೋಚಿಸುವ ಯಾವುದೆ ಕೆಲಸವನ್ನಾದರೂ ಮಾಡಲು ಸಹಕಾರಿಯಾಗುತ್ತದೆ. ಆಡ್-ಆನ್ನ ವ್ಯವಸ್ಥಾಪಕನನ್ನು ತೆರೆಯಲು ಉಪಕರಣಗಳು → ಆಡ್-ಆನ್ಗಳು ಬಳಸಿ ಹಾಗು ಫೈರ್ಫಾಕ್ಸ್ ಅನ್ನು ನಿಮಗೆ ಬೇಕೆಂದ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಮಾರ್ಗಗಳನ್ನು ಕಂಡುಕೊಳ್ಳಿ.
ಇನ್ನಷ್ಟು ಚಾಣಾಕ್ಷತೆಯಿಂದ ಹುಡುಕಿರಿ
ಫೈರ್ಫಾಕ್ಸ್ನಲ್ಲಿ ಒಳಗೊಳ್ಳಿಸಲಾಗಿರುವ ಹುಡುಕು ಸ್ಥಳದ ಬಗ್ಗೆ ನಿಮಗೆ ಈಗಾಗಲೆ ಪರಿಚಯವಿದೆ. ಆದರೆ ಅದನ್ನು ನಿಮಗೆ ಬೇಕಿರುವ ಹುಡುಕು ಸಾಧನದೊಂದಿಗೆ ಕಸ್ಟಮೈಸ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೆ? ಡೀಫಾಲ್ಟ್ ಆಯ್ಕೆಗಳನ್ನು ನೋಡಲು ನಿಮ್ಮ ಹುಡುಕು ಸ್ಥಳದ ಎಡಭಾಗದಲ್ಲಿನ ಚಿಹ್ನೆಯ ಮೇಲೆ ಕ್ಲಿಕ್ಕಿಸಿ.
ಇಷ್ಟೆ ಅಲ್ಲದೆ, ಪಟ್ಟಿಯನ್ನು ಮರುವ್ಯವಸ್ಥೆಗೊಳಿಸಲು, ಇನ್ನಷ್ಟು ಆಯ್ಕೆಗಳನ್ನು ಸೇರಿಸಲು ಹಾಗು ನಿಮ್ಮ ನೆಚ್ಚಿನ ಹುಡುಕು ಸಾಧನಗಳಿಗಾಗಿ ಕೀಲಿಮಣೆ ಶಾರ್ಟ್-ಕಟ್ಗಳನ್ನು ಹೊಂದಿಸಲು ಹುಡುಕು ಸಾಧನಗಳನ್ನು ನಿರ್ವಹಿಸು ಅನ್ನು ಕ್ಲಿಕ್ಕಿಸಿ. ಉದಾಹರಣೆಗೆ, ಗೂಗಲ್ಗೆ "G" ಎಂಬ ಶಾರ್ಟ್-ಕಟ್ ಅನ್ನು ನೀವು ನೀಡಬಹುದು - ನಂತರ ನೀವು ಒಂದು ಅಡುಗೆ ಹೇಗೆ ಮಾಡುವುದು ಎನ್ನುವುದನ್ನು ಹುಡುಕಬೇಕೆಂದಿದ್ದರೆ ತಾಣ ಪಟ್ಟಿಯಲ್ಲಿ "G cookie recipes" ಎಂದು ನಮೂದಿಸಿದರಾಯಿತು, ಅದು ನಿಮಗೆ ಒಂದು ಸಂಪೂರ್ಣ ಪಟ್ಟಿಯನ್ನು ಒದಗಿಸುತ್ತದೆ.
ತಕ್ಷಣ ಪತ್ತೆ ಮಾಡಿ
ನೀವು ಟೈಪ್ ಮಾಡುತ್ತಾ ಹೋದಂತೆಲ್ಲಾ ಅದು ಪತ್ತೆ ಮಾಡಲ್ಪಡುವುದು ಒಂದು ಸುಲಭದ ಹಾಗು ಉತ್ತಮ ಸಮಯ ಉಳಿಸುವ ತಂತ್ರ. ಪುಟದಲ್ಲಿನ ಒಂದು ಪದವನ್ನು ಹುಡುಕಲು "ಹುಡುಕು" ಪಟ್ಟಿಯನ್ನು ಬಳಸುವುದರ ಬದಲು, ಆ ಪುಟದಲ್ಲಿ ಎಲ್ಲಿಯಾದರೂ ಕ್ಲಿಕ್ಕಿಸಿ ಹಾಗು ನೀವು ಹುಡುಕುತ್ತಿರುವ ಪದವನ್ನು ಟೈಪಿಸಲು ಆರಂಭಿಸಿ. ನಿಮ್ಮ ತೆರೆಸೂಚಕವು ಆ ಪದವು ಮೊದಲ ಬಾರಿಗೆ ಇರುವ ಸ್ಥಳಕ್ಕೆ ತೆರಳುತ್ತದೆ.
ನೀವು ಅದನ್ನು ಕೊಂಡಿಗಳಿಗೂ ಸಹ ಬಳಸ ಬಹುದು. ಉದಾಹರಣೆಗೆ, ನಿಮ್ಮ ಮೌಸನ್ನು ಪುಟದಾದ್ಯಂತ ಕೊಂಡು ಹೋಗುವ ಬದಲು ಆ ಪದವನ್ನು ಟೈಪಿಸಲು ಆರಂಭಿಸಿ ಹಾಗು ಅದನ್ನು ತೆರೆಸೂಚಕವು ಪತ್ತೆ ಮಾಡುತ್ತಿದ್ದಂತೆ, ಎಂಟರ್ ಒತ್ತಿ.
ಒಂದಿಷ್ಟೂ ಬಿಡದೆ ಅಳಿಸಿ ಹಾಕಿ
ಸುರಕ್ಷತೆ ಹಾಗು ಖಾಸಗಿ ಕಾರಣದಿಂದಾಗಿ, ನೀವು ವೀಕ್ಷಿಸಿದನ್ನು ಉಳಿಸುವುದು ಒಳ್ಳೆಯದಲ್ಲ(ವಿಶೇಷವಾಗಿ, ಬೇರೊಬ್ಬರೊಂದಿಗೆ ಹಂಚಲ್ಪಡುವ ಗಣಕದಲ್ಲಿ). ಫೈರ್ಫಾಕ್ಸ್ ಕೇವಲ ಒಂದು ಕ್ಲಿಕ್ನಲ್ಲಿ ನೀವು ಈ ಮೊದಲು ಮಾಡಿದ ವೀಕ್ಷಣೆ ಹಾಗು ಡೌನ್ಲೋಡ್ ಅನ್ನು ಅಳಿಸಬಹುದು, ನಿಮ್ಮ ಕ್ಯಾಶೆಯನ್ನು ಹಾಗು ಕುಕಿಗಳನ್ನು ತೆರವುಗೊಳಸಲು ಅನುವು ಮಾಡಿಕೊಡುತ್ತದೆ. ಹಾಗೆ ಮಾಡಲು "ಉಪಕರಣಗಳು → ಖಾಸಗಿ ದತ್ತಾಂಶವನ್ನು ತೆರವುಗೊಳಿಸು" ಗೆ ಹೋಗಿ. ಅಥವ, ಇನ್ನಷ್ಟು ಜಾಗರೂಕರಾಗಿರಲು, ಉಪಕರಣಗಳು → ಆಯ್ಕೆಗಳು → ಖಾಸಗಿ ಗೆ ಹೋಗಿ ಅಲ್ಲಿರುವ "ನಾನು ಫೈರ್ಫಾಕ್ಸ್ ಅನ್ನು ಪ್ರತಿ ಬಾರಿಯೂ ಮುಚ್ಚಿದಾಗ ನನ್ನ ಖಾಸಗಿ ದತ್ತಾಂಶವನ್ನು ಅಳಿಸು" ಅನ್ನು ಆಯ್ಕೆ ಮಾಡಿ.
ನುರಿತ
ನಿಮ್ಮ ನೆಚ್ಚಿನ ತಾಣಗಳಿಗೆ ನೇರವಾಗಿ ಹೋಗಿ
ನಿಮ್ಮ ಬುಕ್ಮಾರ್ಕುಗಳನ್ನು ಸುಲಭವಾಗಿ ಹಾಗು ವೇಗವಾಗಿ ತೆರೆಯಲು, ಅದಕ್ಕೆ ಮುಖ್ಯಪದಗಳನ್ನು ಸೇರಿಸಬಹುದು. ಲೈಬ್ರರಿಯಿಂದ ಕೇವಲ ಒಂದು ಚಿಕ್ಕದಾದಂತಹ ಪ್ರಮುಖ ಪದವನ್ನು ಮುಖ್ಯ ಪದದ ಜಾಗದಲ್ಲಿ ಸೇರಿಸಿದರಾಯಿತು, ಮುಂದೆ ಯಾವಗಲಾದರೂ ನೀವು ಆ ಬುಕ್ಮಾರ್ಕ್ ಅನ್ನು ನೋಡಬೇಕೆಂದಲ್ಲಿ ಕೇವಲ ಆ ಪದವನ್ನು ತಾಣ ಪಟ್ಟಿಕೆಯಲ್ಲಿ ನಮೂದಿಸಿ. ಉದಾಹರಣೆಗೆ, ನಿಮ್ಮ del.icio.us ಖಾತೆಗೆ “links” ಮುಖ್ಯಪದವನ್ನು ಸೇರಿಸಿ ನಂತರ ಬೇಕೆಂದಾಗ ಕೇವಲ “links” ಅನ್ನು ಟೈಪ್ ಮಾಡಿದಲ್ಲಿ ಅದು ನಿಮ್ಮನ್ನು ನೇರವಾಗಿ ಅಲ್ಲಿಗೆ ಕೊಂಡೊಯ್ಯುತ್ತದೆ.
ಸ್ಮಾರ್ಟ್ ಕಡತಕೋಶವನ್ನು ನಿರ್ಮಿಸಿ
ನೀವು ಒಬ್ಬ ನುರಿತ ಜಾಲ ವೀಕ್ಷಕರಾಗಿದ್ದು,ನಿಗದಿತ ತಾಣಗಳ ಹಲವು ಬಗೆಗಳನ್ನು ಉಳಿಸಲು ಹಾಗು ಜಾಡನ್ನು ಇರಿಸುವಲ್ಲಿ, ನಿಮ್ಮ ಸಮಯ ಉಳಿಸಲು ಇಲ್ಲೊಂದು ಉಪಾಯವಿದೆ: ಫೈಫಾಕ್ಸ್ ಲೈಬ್ರರಿಯನ್ನು ಬಳಸಿಕೊಂಡು ನೀವು ಕಡತಕೋಶವನ್ನು ನಿರ್ಮಿಸಿ ಅದಕ್ಕೆ ಹುಡುಕಿದ್ದನ್ನು ಉಳಿಸಿಬಹುದು. ನೀವು ತಾಣಗಳನ್ನು ನಿಮ್ಮ ಬುಕ್ಮಾರ್ಕ್ ಹಾಗು ಇತಿಹಾಸಕ್ಕೆ ಸೇರಿಸಿದಾಗ ಅದು ಅದು ತನ್ನಿಂದತಾನಾಗಿಯೆ ಅಪ್ಡೇಟ್ ಮಾಡಲ್ಪಡುತ್ತದೆ.
ಮೊದಲಿಗೆ, ಬುಕ್ಮಾರ್ಕುಗಳ ಪರಿವಿಡಿಯಿಂದ "ಬುಕ್ಮಾರ್ಕುಗಳನ್ನು ವ್ಯವಸ್ಥಿತಗೊಳಿಸು" ಅನ್ನು ಆರಿಸುವ ಮೂಲಕ ಲೈಬ್ರರಿಯನ್ನು ತೆರೆಯಿರಿ. ನಂತರ, ಹುಡುಕು ಸ್ಥಳದಲ್ಲಿ ನೀವು ಹುಡುಕಬೇಕಿರುವ ಪದಗಳನ್ನು ನಮೂದಿಸಿ. ಆನಂತರ,ಸ್ಮಾರ್ಟ್ ಕಡತಕೋಶವನ್ನು ನಿರ್ಮಿಸಲು "ಉಳಿಸು" ಗುಂಡಿಯನ್ನು ಒತ್ತಿ.
ನಿಮ್ಮ ಡೌನ್ಲೋಡ್ ಮಾಡಿದವುಗಳನ್ನು ವ್ಯವಸ್ಥಿತಗೊಳಿಸಿ
ನೀವು ಪದೆ ಪದೆ ಡೌನ್ಲೋಡ್ ಮಾಡುವ ವ್ಯಕ್ತಿಯಾಗಿದ್ದಲ್ಲಿ,ನಿಮ್ಮ ಎಲ್ಲಾ ಡೌನ್ಲೋಡ್ನ ಜಾಡನ್ನು ಇರಿಸಲು ಡೌನ್ಲೋಡ್ ವ್ಯವಸ್ಥಾಪಕ ವಿಂಡೋ ಅನ್ನು ಬಳಸಿ. ನೀವು ಡೌನ್ಲೋಡ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಹಾಗು ಬೇಕೆಂದಾಗ ಮರುಆರಂಭಿಸಬಹುದು, ಹಾಗು ವ್ಯವಸ್ಥಾಪಕದಿಂದ ನೇರವಾಗಿ ಕಡತಗಳನ್ನು ತೆರೆಯುವುದರ ಮೂಲಕ ಸಮಯವನ್ನು ಉಳಿಸಬಹುದು.
ಹಿಂದಿನ ಡೌನ್ಲೋಡ್ಗಳನ್ನು ನೀವು ಮರಳಿ ನೋಡಲು ಬಯಸಿದಲ್ಲಿ, "ಉಪಕರಣಗಳು→ಡೌನ್ಲೋಡ್ಗಳು" ಗೆ ಹೋಗಿ, ನಿಮ್ಮ ಕಡತವನ್ನು ಪತ್ತೆ ಮಾಡಲು ಹುಡುಕು ಸ್ಥಳವನ್ನು ಬಳಸಿ. ಒಮ್ಮೆ ನೀವದನ್ನು ಪತ್ತೆ ಮಾಡಿದರೆಂದರೆ, ಆ ಕಡತವನ್ನು ತೆರೆಯಲು ಅದರ ಮೇಲೆ ಎರಡು ಬಾರಿ ಕ್ಲಿಕ್ಕಿಸಿ, ಅಥವ Ctrl-ಕ್ಲಿಕ್ ಮಾಡಿ ನಂತರ "ಡೌನ್ಲೋಡ್ ಅನ್ನು ನಕಲಿಸು" ಅನ್ನು ಆಯ್ಕೆ ಮಾಡಿ.
ವಿಕಸನಾ ಸಾಧನಗಳನ್ನು ಕಂಡುಕೊಳ್ಳಿ
ನೀವು ಒಬ್ಬ ಜಾಲ ವಿಕಸನಗಾರರಾಗಿದ್ದಲ್ಲಿ, ಫೈರ್ಫಾಕ್ಸ್ನ ವಿಕಸನಾ ಸಾಧನವು ನಿಮ್ಮ ಕೆಲಸವನ್ನು ಸುಗಮವಾಗಿಸುತ್ತದೆ. ವಿಕಸನಾ ಪ್ರಕ್ರಿಯೆಯನ್ನು streamline ಗೊಳಿಸಲು ಮೋಝಿಲ್ಲಾ ಆಡ್-ಆನ್ಗಳ ತಾಣ ವು CSS ಅನ್ನು ಸಂಪಾದಿಸಲು, ದೋಷಪರಿಹರಿಸಲು ಹಾಗು ನೋಡಿಕೊಳ್ಳಲು ಫೈರ್ಬಗ್, HTML, ಹಾಗು ಜಾಲಪುಟಗಳಲ್ಲಿನ JavaScript ಲೈವ್ HTTP/HTTPS ಹೆಡರುಗಳನ್ನು ಹಾಗು POST ಪ್ಯಾರಾಮೀಟರುಗಳನ್ನು ನೋಡಲು ಹಾಗು ಮಾರ್ಪಡಿಸಲು ಟ್ಯಾಂಪರ್ ಡೇಟಾ, ಹಾಗು ಕೇವಲ ಒಂದು ಬಲ ಕ್ಲಿಕ್ನಿಂದ ಯಾವುದೆ HTMLಅಥವ CSS ಅನ್ನು ಪರಿಶೀಲಿಸಲು DOM ಇನ್ಸ್ಪೆಕ್ಟರಿನಂತಹ ಹಲವಾರು ಸಾಧನಗಳನ್ನು ಒದಗಿಸುತ್ತದೆ.
ನೀವು ಇಷ್ಟಪಡುವ ರೀತಿಯಲ್ಲಿ ಜಾಲವನ್ನು ಸಿದ್ಧಗೊಳಿಸಿ
ಈಗ ನೀವು ನಿಮ್ಮ ಇಷ್ಟದ ಜಾಲ ಅನ್ವಯಗಳನ್ನು ತಕ್ಷಣ ನಿಲುಕಿಸಿಕೊಳ್ಳಲು ಜಾಲ-ಆಧರಿತವಾದ ಪ್ರೊಟೋಕಾಲ್ ಹ್ಯಾಂಡ್ಲರ್ ಅನ್ನು ಬಳಸಬಹುದು. ಉದಾಹರಣೆಗೆ, ನೀವು ಯಾವುದೆ ತಾಣದಲ್ಲಿನ ಒಂದು mailto: ಕೊಂಡಿಯನ್ನು ಕ್ಲಿಕ್ಕಿಸಿದಾಗ ಬೇರೊಂದು ಸಂದೇಶ ವಿಂಡೋವು ಗಣಕದ ಡೀಫಾಲ್ಟ್ ಮೈಲ್ ಪ್ರೋಗ್ರಾಮ್ನಲ್ಲಿ ತೆರೆಯಲ್ಪಡದೆ ನಿಮ್ಮ ಇಚ್ಛೆಯ ವೆಬ್ಮೈಲ್ನಲ್ಲಿ ತೆರೆಯಲ್ಪಡುವಂತೆ ಫೈರ್ಫಾಕ್ಸ್ ಅನ್ನು ನೀವು ಹೊಂದಿಸಬಹುದಾಗಿದೆ (ಸೂಚನೆ: ಈ ಸವಲತ್ತು ಕೇವಲ ಫೈರ್ಫಾಕ್ಸ್ 3 ರೊಂದಿಗೆ ನೋಂದಾಯಿಸಲ್ಪಟ್ಟ ವೆಬ್ಮೈಲ್ನೊಂದಿಗೆ ಮಾತ್ರ ಇರುತ್ತದೆ).
ಪ್ರತಿಯೊಂದು ಪ್ರೋಟೋಕಾಲ್ಗೆ ಡೀಫಾಲ್ಟ್ ಅನ್ವಯವನ್ನು ಆರಿಸಲು ಅಥವ ಅನ್ವಯವನ್ನು ನೀವೆ ಆರಿಸಲು ಬಯಸಿದಲ್ಲಿ "ಪ್ರತಿಬಾರಿಯೂ ಕೇಳು" ಅನ್ನು ಆಯ್ಕೆ ಮಾಡಲು ಉಪಕರಣಗಳು→ಆಯ್ಕೆಗಳು→ಅನ್ವಯಗಳು ಗೆ ಹೋಗಿ.
ನೀವು ಒಬ್ಬ ಜಾಲ ಅನ್ವಯ ವಿಕಸನಕಾರರಾಗಿದ್ದರೆ, ಮೋಝಿಲ್ಲಾ ವಿಕಸನಗಾರರ ಕೇಂದ್ರದಲ್ಲಿ ಜಾಲ-ಆಧರಿತ ಪ್ರೋಟೋಕಾಲ್ ಹ್ಯಾಂಡ್ಲರಿಗೆ ಬೆಂಬಲವನ್ನು ಹೇಗೆ ಸೇರ್ಪಡಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.